ETV Bharat / state

RSS, ಬಿಜೆಪಿಯನ್ನು ತೋಂಟದ ಸಿದ್ಧಲಿಂಗ ಶ್ರೀಗಳು ವಿರೋಧಿಸಿದ್ದು ಅರಿವಿಲ್ಲವೇ?.. ಸಿಎಂಗೆ ದಿಂಗಾಲೇಶ್ವರ ಶ್ರೀ ಪ್ರಶ್ನೆ - ಸಿದ್ಧಲಿಂಗ ಶ್ರೀಗಳ ಜನ್ಮದಿನದಂದು ಭಾವೈಕ್ಯತಾ ದಿನಾಚರಣೆ

ಸಂಘಪರಿವಾರ, ಆರ್​​ಎಸ್​ಎಸ್, ಬಿಜೆಪಿಯವರನ್ನು ವಿರೋಧ ಮಾಡಿದ್ದು ನಿಮಗೆ ಅರಿವಿಲ್ಲವೇ?. ಅಂತಾ ಸ್ವಾಮಿಗಳಿಗೆ ಭಾವೈಕ್ಯತೆಯ ದಿನ ಅಂತಾ ಘೋಷಣೆ ಮಾಡಿದ್ದರ ಹಿನ್ನೆಲೆ ಏನು?. ನಿಮ್ಮ ಅದ್ಭುತ ರಾಜಕರಾಣಕ್ಕೆ ಮಠಗಳೂ ಸಾಲುತ್ತಿಲ್ಲ ಎಂಬುದು ದುರಂತದ ಸಂಗತಿಯಾಗಿದೆ. ನಿಮ್ಮ ಪಕ್ಷದ ಸಿದ್ಧಾಂತಗಳು ಮಠದ ಪರವಾಗಿ ಇದ್ದಾವೋ ಅಥವಾ ಮಠಗಳ ನಾಶಕ್ಕಾಗಿದಾವೋ ಎಂಬುದನ್ನೂ ಸ್ಪಷ್ಟಪಡಿಸಿ ಎಂದು ಕಿಡಿಕಾರಿದ್ದಾರೆ..

ಸಿಎಂಗೆ ಫಕೀರ್ ದಿಂಗಾಲೇಶ್ವರ ಶ್ರೀ ಪ್ರಶ್ನೆ
ಸಿಎಂಗೆ ಫಕೀರ್ ದಿಂಗಾಲೇಶ್ವರ ಶ್ರೀ ಪ್ರಶ್ನೆ
author img

By

Published : Apr 20, 2022, 4:44 PM IST

ಗದಗ : ಫೆಬ್ರವರಿ 21ರಂದು ಸಿದ್ಧಲಿಂಗ ಶ್ರೀಗಳ ಜನ್ಮದಿನದಂದು ಭಾವೈಕ್ಯತಾ ದಿನಾಚರಣೆಯನ್ನಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದರೆ, ಈಗ ಇದೇ ವಿಚಾರಕ್ಕೆ ಗದಗ ಜಿಲ್ಲೆ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ್ ದಿಂಗಾಲೇಶ್ವರ ಶ್ರೀಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗೆ ಕಡು ವೈರಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳು ಸದಾಕಾಲ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು. ಒಂದು ಬ್ರಾಹ್ಮಣ ಸಮುದಾಯವನ್ನು ಎತ್ತಿ ಎತ್ತಿ ಬೈತಿದ್ದ ಸ್ವಾಮಿಗಳು ಭಾವೈಕ್ಯತೆ ಮೂರ್ತಿಯಾಗುತ್ತಾರೆಯೇ?. ಹಿಂದುತ್ವವಾದಿಗಳನ್ನು ಹಿಗ್ಗಾಮುಗ್ಗಾ ಇಯ್ಯಾಳಿಸುವ ಸ್ವಾಮಿಗಳು, ಅವರು ಭಾವೈಕ್ಯತೆ ಮೂರ್ತಿಗಳಾಗುತ್ತಾರೆಯೇ?.

ವೀರಶೈವ ಲಿಂಗಾಯತ ಸಮುದಾಯ ಒಂದಲ್ಲ ಅವು ಎರಡು ಎಂಬ ವಿವಾದ ಸೃಷ್ಟಿ ಮಾಡಿದವರು. ಇಡೀ ಸಮಾಜ ಹೊತ್ತಿ ಉರಿಯುವ ಹಾಗೆ ಒಂದು ಪಕ್ಷದ ಬೆಂಬಲ ತೆಗೆದುಕೊಂಡವರು. ಅದರಲ್ಲೂ ನಿಮ್ಮ ವಿರೋಧ ಪಕ್ಷದ ಬೆಂಬಲ ತೆಗೆದುಕೊಂಡು ಕೆಟ್ಟ ನಿರ್ಧಾರಕ್ಕೆ ಕೈ ಹಾಕಿದ್ದು ನಿಮಗೆ ಅರಿವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂಗೆ ಫಕೀರ್ ದಿಂಗಾಲೇಶ್ವರ ಶ್ರೀ ಪ್ರಶ್ನೆ

ಅಲ್ಲದೇ, ಸಂಘಪರಿವಾರ, ಆರ್​​ಎಸ್​ಎಸ್, ಬಿಜೆಪಿಯವರನ್ನು ವಿರೋಧ ಮಾಡಿದ್ದು ನಿಮಗೆ ಅರಿವಿಲ್ಲವೇ?. ಅಂತಾ ಸ್ವಾಮಿಗಳಿಗೆ ಭಾವೈಕ್ಯತೆಯ ದಿನ ಅಂತಾ ಘೋಷಣೆ ಮಾಡಿದ್ದರ ಹಿನ್ನೆಲೆ ಏನು?. ನಿಮ್ಮ ಅದ್ಭುತ ರಾಜಕರಾಣಕ್ಕೆ ಮಠಗಳೂ ಸಾಲುತ್ತಿಲ್ಲ ಎಂಬುದು ದುರಂತದ ಸಂಗತಿಯಾಗಿದೆ. ನಿಮ್ಮ ಪಕ್ಷದ ಸಿದ್ಧಾಂತಗಳು ಮಠದ ಪರವಾಗಿ ಇದ್ದಾವೋ ಅಥವಾ ಮಠಗಳ ನಾಶಕ್ಕಾಗಿದಾವೋ ಎಂಬುದನ್ನೂ ಸ್ಪಷ್ಟಪಡಿಸಿ ಎಂದು ಕಿಡಿಕಾರಿದ್ದಾರೆ.

ಅವರಿಗೆ ಪ್ರಶಸ್ತಿಗಳನ್ನ ಒಂದಲ್ಲ, ನೂರು ಕೊಡಿ. ವರ್ಷದ 365 ದಿನಗಳನ್ನೂ ಅವರ ಜನ್ಮದಿನಕ್ಕೆ, ಅವರ ಸಾಧನೆಗೆ ಮೀಸಲಿಡಿ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅವರು ಭಾವೈಕ್ಯತೆ ಅನ್ನೋ ಶಬ್ದಕ್ಕೆ ಕಡುವೈರಿಯಾಗಿದ್ದಾರೆ. ಅವರ ನಡತೆ ಭಾವೈಕ್ಯತೆಗೆ ವಿರೋಧವಾಗಿದೆ. ರಾಜಕಾರಣಿಗಳಿಗೆ ಅಧ್ಯಯನದ ಕೊರತೆ ಇದೆ. ಭಾವೈಕ್ಯತೆ ಮತ್ತು ಅವರ ನಡೆಗೆ ಸಾಮ್ಯತೆ ಇರಬೇಕು. 500 ವರ್ಷಗಳಿಂದ ಶಿರಹಟ್ಟಿ ಮಠ ಭಾವೈಕ್ಯತೆ ಸಾರುತ್ತಾ ಬಂದಿದೆ. 13-14 ತಲೆಮಾರುಗಳಿಂದ ಶಿರಹಟ್ಟಿ ಮಠ ಭಾವೈಕ್ಯತೆ ಮಠ ಎಂದು ಎನಿಸಿಕೊಂಡು ಬಂದಿದೆ‌ ಅಂತಾ ಕೋಪದಿಂದ ನುಡಿದಿದ್ದಾರೆ.

ಇದನ್ನೂ ಓದಿ: 'ಯಡಿಯೂರಪ್ಪರಿಂದಲೇ ಬೆಳೆದು ಈಗ ಅವರ ವಿರುದ್ಧವೇ ಯತ್ನಾಳ ಕತ್ತಿ ಮಸೆಯುತ್ತಿದ್ದಾರೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.