ಗದಗ: ಕಪ್ಪತ್ತಗುಡ್ಡಕ್ಕೆ ಬೆಂಕಿ ಹತ್ತಿಕೊಳ್ಳಲು ವಿಂಡ್ ಪವರ್ ಸುಜಲಾನ್ ಕಂಪನಿ ಕಾರಣವೆಂದು ಆರೋಪಿಸಿ ಉಚ್ಛಾಟನೆಗೊಂಡ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದೆರು.
ಮುಂಡರಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಸುಜಲಾನ್ ಕಂಪನಿಯ 130 ಭದ್ರತಾ ಕಾರ್ಮಿಕರು ಕಳೆದ 22 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೆ ಸುಜಲಾನ್ ಕಂಪನಿ ಆಗಲಿ, ತಹಶೀಲ್ದಾರ್ ಆಗಲಿ ಬಂದು ಸಮಸ್ಯೆ ಆಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಬಾವಿ - ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಪ್ಪತ್ತಗುಡ್ಡ ಸುಡಲು ಕಾರಣರಾದ ಸುಜಲಾನ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಜಲಾನ್ ಕಂಪನಿ ಅಧಿಕಾರಿಗಳು ಹಾಗೂ ಪವನಯಂತ್ರ ಮಾಲೀಕರನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿದ್ರು.