ETV Bharat / state

ಕಪ್ಪತ್ತಗುಡ್ಡ ವನ್ಯಜೀವಿಧಾಮ ಸ್ಥಾನಮಾನಕ್ಕೆ ಶಾಸಕನ ವಿರೋಧ: ಸ್ಥಳೀಯರ ಆಕ್ರೋಶ - ರೋಣ ಶಾಸಕ ಕಳಕಪ್ಪ ಬಂಡಿ

ಕಪ್ಪತ್ತಗುಡ್ಡ ವನ್ಯಜೀವಿಧಾನದ ಸ್ಥಾನಮಾನ ತೆಗೆಯಬೇಕೆಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿರುವುದು ಈಗ ಜಿಲ್ಲೆಯ ಜನರಲ್ಲಿ ಅನುಮಾನ ಮೂಡಿಸಿದೆ.

ಕಪ್ಪತಗುಡ್ಡ ವನ್ಯಜೀವಿಧಾಮ ಘೋಷಣೆಗೆ ಬಿಜೆಪಿ ಶಾಸಕರಿಂದಲೇ ವಿರೋಧ
author img

By

Published : Oct 3, 2019, 6:27 PM IST

ಗದಗ: ಕಪ್ಪತ್ತಗುಡ್ಡ ವನ್ಯಜೀವಿಧಾನದ ಸ್ಥಾನಮಾನ ತೆಗೆಯಬೇಕೆಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿರುವುದು ಈಗ ಜಿಲ್ಲೆಯ ಜನರಲ್ಲಿ ಅನುಮಾನ ಮೂಡಿಸಿದೆ.

ಹಲವು ಪ್ರಾಮುಖ್ಯತೆ ಪಡೆದಿರೋ ಗದಗ ಜಿಲ್ಲೆಯ ಕಪ್ಪತ್ತಗುಡ್ಡ, ಉತ್ತರ‌ ಕರ್ನಾಟಕದ ಪಾಲಿಗೆ ಸಂಜೀವಿ‌ನಿ‌ ಶಿಖರವಿದ್ದಂತೆ. ಈ ಸಂಜೀವಿನಿಯನ್ನು ಉಳಿಸಿಕೊಳ್ಳಲು ಈ ಭಾಗದ ಪರಿಸರ ಪ್ರೇಮಿಗಳು ಹೋರಾಟ ಮಾಡಿದ ಫಲವಾಗಿ ಕಪ್ಪತ್ತಗುಡ್ಡಕ್ಕೆ ಸರ್ಕಾರ ವನ್ಯಜೀವಿಧಾಮ ಸ್ಥಾನ ನೀಡಿದೆ.

ಕಪ್ಪತ್ತಗುಡ್ಡದ ಸರಹದ್ದಿನಲ್ಲಿಯೂ ಸಹ ತನ್ನ ಕ್ಷೇತ್ರ ಹೊಂದಿರೋ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ, ಕಪ್ಪತ್ತಗುಡ್ಡಕ್ಕೆ ವನ್ಯಜೀವಿಧಾಮ ಸ್ಥಾನ ನೀಡಿರೋದನ್ನು ವಿರೋಧಿಸಿದ್ದಾರೆ. ಜಿಲ್ಲೆಯ ಡಂಬಳ ಗ್ರಾಮದ ಶಾಲೆಯ ನೂತನ‌ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, ಕಪ್ಪತ್ತಗುಡ್ಡದ ವನ್ಯಜೀವಿಧಾಮ ಸ್ಥಾನವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಕಪ್ಪತ್ತಗುಡ್ಡ ವನ್ಯಜೀವಿಧಾಮ ಘೋಷಣೆಗೆ ಬಿಜೆಪಿ ಶಾಸಕರಿಂದಲೇ ವಿರೋಧ!

ಕಪ್ಪತ್ತಗುಡ್ಡದಲ್ಲಿ ಯಾವುದೇ ಹುಲಿ, ಸಿಂಹಗಳು ವಾಸವಾಗಿಲ್ಲ. ದನಕರುಗಳನ್ನು ಮೇಯಿಸಲು ಹೋದ್ರೆ ಅವರ ಮೇಲೆಯೇ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಾರೆ. ಹೀಗಾಗಿ ರೈತರಿಗೆ ಇಲ್ಲಿ ಅನುಕೂಲಕ್ಕಿಂತ ತೊಂದರೆಯೇ ಜಾಸ್ತಿಯಾಗಿದೆ ಎಂದು ಭಾಷಣ ಮಾಡಿದ್ದಾರೆ.‌ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳಕಪ್ಪ ಬಂಡಿ ಅವರ ಈ ಹೇಳಿಕೆಗೆ ಈಗ ಗದಗ ಜಿಲ್ಲೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕಪ್ಪತ್ತಗುಡ್ಡ ವನ್ಯಜೀವಿಧಾಮದ ಸ್ಥಾನಮಾನ ಹಾಗೇ ಇರಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಈ ಬಗೆಯ ವಿಷಯಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರೆ ಮತ್ತೊಂದು ಹೋರಾಟ ಮಾಡಬೇಕಾಗುತ್ತೆ ಎಂದು ಪರಿಸರ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ.‌

Intro:ಕಪ್ಪತಗುಡ್ಡ ವನ್ಯಜೀವಿಧಾಮ ಘೋಷಣೆಯಾಗಿರೋಕೆ ಬಿಜೆಪಿ ಶಾಸಕರೇ ವಿರೋಧ....ಸರ್ಕಾರ ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದ ಬಿಜೆಪಿ ಶಾಸಕ ಕಳಕಪ್ಪ ಬಂಡಿ.....ಗಣಿ ಕಳ್ಳರ ಪ್ರಯತ್ನಕ್ಕೆ ಉತ್ತೇಜನ ನೀಡಿದಂತಿದೆ ಶಾಸಕರ ಮಾತು......ಶಾಸಕರ ಹೇಳಿಕೆಗೆ ರೈತಸಮೂಹ ಕಿಡಿ

ಆಂಕರ್-ಗದಗನ‌ ಕಪ್ಪತಗುಡ್ಡ ಯಾರಿಗೆ ಗೊತ್ತಿಲ್ಲ ಹೇಳಿ. ಹೇಳಿಕೇಳಿ ಅದು ಅಪಾರ ಔಷಧೀಯ ಸಸ್ಯರಾಶಿಯ, ಅಪರೂಪದ ಪ್ರಾಣಿಸಂಕುಲದ ಬೀಡು. ಹೀಗಾಗಿಯೇ ಹಿಂದಿನ ಸರ್ಕಾರ ಇದನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದೆ. ಆದ್ರೆ ಈಗಿನ ಬಿಜೆಪಿ ಸರ್ಕಾರಕ್ಕೆ ಅದೇಕೋ ಈ ವಿಚಾರವೇ ಹಿಡಿಸ್ತಿಲ್ಲ ಅಂತ ಕಾಣುತ್ತೆ. ಗದಗನ ರೋಣ ಶಾಸಕ ಕಳಕಪ್ಪ ಬಂಡಿ ಅವರ ಹೇಳಿಕೆಯೀಗ ಜಿಲ್ಲೆಯ ಜನ್ರಲ್ಲಿ ಈ ಅನುಮಾನ ಮೂಡಿಸಿದ್ದು, ವನ್ಯಜೀವಿಧಾನದ ಸ್ಥಾನಮಾನ ತೆಗೆಯಬೇಕೆಂದು ಶಾಸಕ ಕಳಕಪ್ಪ ಬಂಡಿ ಹೇಳಿದ್ದಾರೆ‌.

ಬೈಟ್೦೧-ಕಳಕಪ್ಪ ಬಂಡಿ, ರೋಣ ಬಿಜೆಪಿ ಶಾಸಕ.

ವಾ/ಓಂ೧- ಎಸ್ ಇವರು ಗದಗ ಜಿಲ್ಲೆಯ ರೋಣದ ಬಿಜೆಪಿ ಶಾಸಕ ಕಳಕಪ್ಪ ಬಂಡಿ. ಇವರಿಗೇಕೋ ಕಪ್ಪತಗುಡ್ಡದ ವನ್ಯಜೀವಿಧಾಮದ ಸ್ಥಾನಮಾನ ಇಷ್ಟವಿಲ್ಲವೆಂದು ಇವರ ಮಾತಿನಲ್ಲಿಯೇ ಸ್ಪಷ್ಟವಾಗ್ತಿದೆ. ಹಲವು ಪ್ರಾಮುಖ್ಯತೆ ಪಡೆದಿರೋ ಗದಗ ಜಿಲ್ಲೆಯ ಕಪ್ಪತಗುಡ್ಡ ಉತ್ತರ‌ ಕರ್ನಾಟಕದ ಪಾಲಿಗೆ ಸಂಜೀವಿ‌ನಿ‌ ಶಿಖರವಿದ್ದಂತೆ. ಈ ಸಂಜೀವಿನಿಯನ್ನು ಉಳಿಸಿಕೊಳ್ಳೋಕೆ ಈ ಭಾಗದ ಪರಿಸರ ಪ್ರೇಮಿಗಳು ಏನೆಲ್ಲ ಹೋರಾಟ ಮಾಡಿದ ಫಲವಾಗಿ ಕಪ್ಪತಗುಡ್ಡಕ್ಕೆ ಸರಕಾರ ವನ್ಯಜೀವಿಧಾಮ ಸ್ಥಾನವನ್ನು ನೀಡಿದೆ. ಆದರೆ ಇದೀಗ ರಕ್ಷಿಸಬೇಕಾದವರೇ ಭಕ್ಷಿಸಿ ಬಾಯಿಗೆ ಹಾಕುವಂತ ಹೇಳಿಕೆ, ಗೊಂದಲಗಳನ್ನು ಮೂಡಿಸ್ತಿರೋದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಪ್ಪತಗುಡ್ಡದ ಸರಹದ್ದಿನಲ್ಲಿಯೂ ಸಹ ತನ್ನ ಕ್ಷೇತ್ರ ಹೊಂದಿರೋ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಕಪ್ಪತಗುಡ್ಡಕ್ಕೆ ವನ್ಯಜೀವಿಧಾಮ ನೀಡಿರೋದನ್ನು ವಿರೋಧಿಸಿದ್ದಾರೆ. ಜಿಲ್ಲೆಯ ಡಂಬಳ ಗ್ರಾಮದ ಶಾಲೆಯ ನೂತನ‌ ಕೋಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, ಕಪ್ಪತಗುಡ್ಡದ ವನ್ಯಜೀವಿ ಸ್ಥಾನವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಈ ಹಿಂದೆ ಇದೇ ಬಿಎಸ್ವೈ ಅಚರು ಸಿಎಂ ಆಗಿದ್ದ ವೇಳೆ ಪೋಸ್ಕೋ ಕಂಪನಿ ಸ್ಥಾಪನೆಯಾಗಬೇಕಿತ್ತು. ಆಗ ದಿವಂಗತ ಕೆ ಎಚ್ ಪಾಟೀಲರ ಮಕ್ಕಳಾದ ಡಿ ಆರ್ ಪಾಟೀಲ್ ಹಾಗೂ ಎಚ್ ಕೆ ಪಾಟೀಲ್ ಅವರು ವಿರೋಧ ಮಾಡಿ ಕಾರ್ಖಾನೆ ಸ್ಥಾಪನೆಗೆ ಹಿನ್ನಡೆ ತಂದ್ರು ಅಂತ ಪರೋಕ್ಷವಾಗಿ ಅವರ ಮೇಲೆ ಹರಿಹಾಯ್ದರು.

ಬೈಟ್೦೧-ಕಳಕಪ್ಪ ಬಂಡಿ, ರೋಣ ಬಿಜೆಪಿ ಶಾಸಕ.

ವಾ/ಓಂ೨- ಕಪ್ಪತಗುಡ್ಡದಲ್ಲಿ ಯಾವುದೇ ಹುಲಿ, ಸಿಂಹಗಳು ವಾಸವಾಗಿಲ್ಲ. ದನಕರುಗಳನ್ನು ಮೇಯಿಸಲು ಹೋದ್ರೆ ಅವರ ಮೇಲೆಯೇ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಾರೆ. ಹೀಗಾಗಿ ರೈತರಿಗೆ ಇಲ್ಲಿ ಅನುಕೂಲಕ್ಕಿಂತ ತೊಂದರೆಯೇ ಜಾಸ್ತಿಯಾಗಿದೆಯಂತ ರೈತಾಪಿ ವರ್ಗವನ್ನು ವನ್ಯಜೀವಿಧಾಮದ ವಿರುದ್ಧವಾಗಿ ತಿರಗಿಸೋ ಬಗೆಯಾಗಿ ಭಾಷಣ ಮಾಡಿದ್ರು.‌ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳಕಪ್ಪ ಬಂಡಿ ಅವರ ಈ ಹೇಳಿಕೆಗೀಗ ಗದಗ ಜಿಲ್ಲೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ರೈತರಿಗೆ ಅನುಕೂಲ ಆಗಲ್ಲ ಅನ್ನೋ ಬಂಡಿ‌ ಸಾಹೇಬ್ರು ಕಪ್ಪತಗುಡ್ಡ ಕೈ ಬಿಟ್ರೆ ಎರಡನೇ ಬಳ್ಳಾರಿ ಆಗುತ್ತೆ ಅಂತ ಯಾಕ ಮಾತಾಡ್ತಿಲ್ಲ? ಗಣಿಗಾರಿಕೆ ನಡೆದು ಅಲ್ಲಿರೋ ಅಪಾರ ಔಷಧಿ ಸಸ್ಯಗಳು ಹಾಳಾಗ್ತವೆ. ಗಣಿಗಾರಿಕೆಗೆ‌ ಸಿಕ್ಕು ಸುತ್ತಲಿರೋ ಗ್ರಾಮಗಳು ಸರ್ವನಾಶವಾಗುತ್ವೆ. ಅಲ್ಲಿನ ಜನ್ರು ರೋಗಕ್ಕೆ ಈಡಾಗ್ತಾರೆ. ಅಲ್ಲಿ ನೆಲೆಸಿರೋ ಅದೆಷ್ಟೋ ಸಣ್ಣ ಸಣ್ಣ‌ ಪ್ರಾಣಿಗಳು ಸಾವನ್ನಪ್ತವೆ. ಅಲ್ಲಿನ ನೀರು,ಗಾಳಿ ಕಲ್ಮಶ ಆಗುತ್ತೆ. ಪರಿಸರ ಉಳಿಸಿ ಅಂತ ಫೋಟೋಗೆ ಫೋಸ್ ಕೊಡೋ ಇವರು ಸುಮಾರು 33,000 ಸಾವಿರ ಹೆಕ್ಟೇರ್ ಪರಿಸರ, ಸಾವಿರಾರು ಗಿಡಮರಗಳು ನಾಶವಾಗಿ ಇಡೀ ಕಪ್ಪತಗಿರಿಯೇ ಬಟಾ ಬಯಲಾಗುತ್ತೆ ಅಂತಾ ಯಾಕ ಮಾತಾಡ್ತಿಲ್ಲ ಸ್ವಾಮಿ‌ ಹೇಳಿ? ಅಂತ ಪ್ರಶ್ನಿಸ್ತಿದ್ದಾರೆ ರೈತ ಮುಖಂಡರು.

ಬೈಟ್೦೨-ವಿಠಲ‌ ಗಣಾಚಾರಿ, ರೈತ ಮುಖಂಡ

ಬೈಟ್ ೦೩ :- ಸಿಸಿ ಪಾಟೀಲ್, ಸಚಿವ

ಈ ಹಿಂದೆ‌ ಪೋಸ್ಕೋ ಬಂದಾಗಲೂ ಬಿಜೆಪಿ ಸರ್ಕಾರವಿತ್ತು. ಈಗ್ಲೂ ಸಹ ಬಿಜೆಪಿ ಸರ್ಕಾರವಿದೆ. ಇದೆಲ್ಲಾ ನೋಡ್ತಿದ್ರೆ ಇವರೆಲ್ಲಾ ಬಂಡವಾಳಶಾಹಿಗಳ ಕೈಗೊಂವೆಗಳೆನ್ನೋದು ಕಾಣುತ್ತೆ ಅಂತಿದ್ದಾರೆ ರೈತಪರ ಹೋರಾಟಗಾರರು. ಏನೇ ಆಗ್ಲಿ ಕಪ್ಪತಗುಡ್ಡದ ವನ್ಯಜೀವಿಧಾಮದ ಸ್ಥಾನಮಾನ ಹಾಗೆ ಇರಬೇಕು ಎನ್ನೋದು ಎಲ್ಲರ ಅಭಿಪ್ರಾಯವಾಗಿದೆ. ಈ ಬಗೆಯಾದ ವಿಷಯಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳೋ ರಾಜಕಾರಣಿಗಳ ವಿರುದ್ಧ ಪರಿಸರ ಪ್ರೇಮಿಗಳು ಮತ್ತೊಂದು ಹೋರಾಟದ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.‌Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.