ಗದಗ: ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಜಿಲ್ಲೆಯ ಇಬ್ಬರು ಮುಖ್ಯ ಶಿಕ್ಷಕರು ಹಾಗೂ ಓರ್ವ ಶಿಕ್ಷನನ್ನು ಅಮಾನತು ಮಾಡಿದ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಎನ್. ಎಚ್. ನಾಗೂರು ಹೊರಡಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ಮ್ಯಾಗೇರಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ. ಸರ್ಜಾಪುರ ಅವರು, ಇಲಾಖೆ ನಿಯಮಗಳನ್ನು ಮೀರಿ ಕಳಪೆ ಗುಣಮಟ್ಟದ ಮಕ್ಕಳ ಷೂ ಹಾಗೂ ಸಾಕ್ಸ್ ಖರೀದಿ ಮಾಡಿದ್ದಾರೆ. ಲಕ್ಷ್ಮೇಶ್ವರ ಶಾಲೆಯ ಮುಖ್ಯ ಶಿಕ್ಷಕ ಎ.ಎಸ್. ಬಣಗಾರ ಅವರು, ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ 6.44 ಲಕ್ಷ ರೂ. ದುರುಪಯೋಗ ಮಾಡಿದ್ದಾರೆ. ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಎಸ್.ಕೆ. ಗಾಡರೆಡ್ಡಿ ಮಧ್ಯಪಾನ ಮಾಡಿ ಶಾಲೆಗೆ ಬರುವುದು ಹಾಗೂ ಶಾಲೆಗೆ ತಡವಾಗಿ ಬಂದು ಕರ್ತವ್ಯಲೋಪ ಎಸಗಿದ್ದಾರೆ.
ಈ ಎಲ್ಲಾ ವಿಷಯಗಳನ್ನು ಪರಶೀಲನೆ ನಡೆಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಎಚ್. ನಾಗೂರು ಅಮಾನತು ಆದೇಶ ಹೋರಡಿಸಿದ್ದಾರೆ.