ಗದಗ: ಲಾಕ್‌ಡೌನ್ ಹಿನ್ನೆಲೆ ಅಂದೇ ದುಡಿದು ಅಂದೇ ಊಟ ಮಾಡುವವರು ಬಹಳಷ್ಟು ಪರದಾಡುವಂತಾಗಿದೆ. ಕೂಲಿ ಕಾರ್ಮಿಕರ ಜೊತೆಗೆ ಕ್ಷೌರಿಕರೂ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೌರಿಕರ ಅಂಗಡಿಗಳಿಗೂ ಬ್ರೇಕ್ ಬಿದ್ದಿರೋದ್ರಿಂದ ಅಂಗಡಿ ಬಾಡಿಗೆ ಕಟ್ಟುವುದರ ಜೊತೆಗೆ ಅವರ ನಿತ್ಯದ ಬದುಕು ನಡೆಸೋದು ಕಷ್ಟವಾಗಿದೆ.
ಲಾಕ್ಡೌನ್ನಿಂದ ಅಂಗಡಿಗಳನ್ನು ಬಂದ್ ಮಾಡಿಸಿದ್ದರಿಂದ ಹಿಂದಿನ ಸಂಪ್ರದಾಯದಂತೆ ಮನೆ ಮನೆಗೆ ತೆರಳಿ ಕಟಿಂಗ್,ಶೇವಿಂಗ್ ಮಾಡುವ ವ್ಯವಸ್ಥೆ ಸದ್ಯ ಅವರಿಗೆ ಒದಗಿ ಬಂದಿದೆ. ನಗರದಲ್ಲಿ ಮನೆ ಮನೆಗೆ ತೆರಳಿ ಮಾಸ್ಕ್ ಹಾಕಿ ಕ್ಷೌರಿಕರು ಕ್ಷೌರ ಮಾಡುತ್ತಿದ್ದಾರೆ. ಸಾಮಾಜಿಕ ಅಂತರದ ನಿಯಮಗಳನ್ನು ಕಾಯ್ದುಕೊಂಡೇ ಬದುಕು ದೂಡುತ್ತಿದ್ದಾರೆ.
ಈ ಸಮಯದಲ್ಲಿ ಪೊಲೀಸರು ಸ್ವಲ್ಪ ಸಹಕರಿಸಿದರೆ ನಮ್ಮ ಹೊಟ್ಟೆ ತುಂಬಿಸಿಕೊಳ್ತೀವಿ ಸ್ವಾಮಿ ಅಂತಿದ್ದಾರೆ. ಮತ್ತೊಂದೆಡೆ ಕ್ಷೌರಿಕರು ಸಿಗದೇ ಜನ ದಾಡಿ, ತಲೆ ಕೂದಲು ಹಾಗೇ ಬಿಡ್ಕೊಂಡಿದ್ದಾರೆ.