ಗದಗ: ರಾತ್ರಿಯಿಡೀ ನಿರಂತರ ಮಳೆ ಸುರಿದ ಪರಿಣಾಮ ಗದಗ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಇದೇ ವೇಳೆ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ಸ್ಥಳಿಯರು ರಕ್ಷಿಸಿದ್ದಾರೆ.
ಕೊಚ್ಚಿ ಹೋಗ್ತಿದ್ದ ಬೈಕ್ ಸವಾರನನ್ನ ಸ್ಥಳೀಯರು ಹಗ್ಗದ ಮೂಲಕ ಬಚಾವ್ ಮಾಡಿದ್ದಾರೆ. ಸಂಶಿ ಗ್ರಾಮದಿಂದ ಬೆಳ್ಳಟ್ಟಿ ಗ್ರಾಮಕ್ಕೆ ತೆರಳ್ತಿದ್ದ ಬೈಕ್ ಸವಾರ ಸ್ಥಳೀಯರು ಬೇಡ ಎಂದರೂ ಮಾತು ಕೇಳದೆ ಉಕ್ಕಿ ಹರಿಯುತ್ತಿರೋ ಹಳ್ಳ ದಾಟುವ ದುಸ್ಸಾಹಸ ಮಾಡಿದ್ದಾನೆ. ನೀರಿನ ರಭಸ ಹೆಚ್ಚಾಗಿದ್ದ ಪರಿಣಾಮ ನೀರಿನ ಮಧ್ಯೆ ಆತ ಸಿಲುಕಿಕೊಂಡಿದ್ದ. ಈ ಘಟನೆ ಗಮನಿಸಿದ ಸ್ಥಳೀಯರು ಹಗ್ಗದ ಮೂಲಕ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾದ್ರು.