ETV Bharat / state

ಹೂ ತರಲು ಹೋಗಿದ್ದಾಗ ಭೂ ಕುಸಿತ: 14-15 ಅಡಿ ಆಳಕ್ಕೆ ಹೋದ ವೃದ್ಧ!

ದೇವರ ಪೂಜೆಗೆಂದು ಹೂ ತರಲು ಹೋದ ವೇಳೆ ಭೂಮಿ ಇದ್ದಕ್ಕಿದ್ದಂತೆ ಕುಸಿದ ಪರಿಣಾಮ ವೃದ್ಧನೊಬ್ಬ ಗಾಯಗೊಂಡ ಘಟನೆ ಗದಗ ಜಿಲ್ಲೆಯಲ್ಲಿ ಸಂಭವಿಸಿದೆ.

author img

By

Published : Oct 27, 2019, 1:29 PM IST

ಹೂ ತರಲು ಹೋಗಿದ್ದಾಗ ಭೂ ಕುಸಿತ

ಗದಗ: ವೃದ್ಧನೊಬ್ಬ ದೇವರ ಪೂಜೆಗೆಂದು ಹೂ ತರಲು ಹೋದ ವೇಳೆ ಭೂಮಿ ಕುಸಿದ ಪರಿಣಾಮ ಗಾಯಗೊಂಡ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಸಂಭವಿಸಿದೆ.

ರತ್ನಾಕರ ದೇಶಪಾಂಡೆ ಎಂಬ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದವರು. ಮುಂಜಾನೆ ತಮ್ಮ ಮನೆಯ ಹಿತ್ತಿಲಿಗೆ ಹೂಗಳನ್ನು ತರಲೆಂದು ಇವರು ತೆರಳಿದ್ದರು. ಈ ವೇಳೆ ತಾನು ನಿಂತಿದ್ದ ಸ್ಥಳ ದಿಢೀರ್​​ ಕುಸಿದು ಸುಮಾರು 14-15 ಅಡಿ ಆಳದಲ್ಲಿ ಅವರು ಸಿಲುಕಿಕೊಂಡಿದ್ದರು. ಬಳಿಕ ಮನೆಯವರು ಹಾಗೂ ಸ್ಥಳೀಯರು ರತ್ನಾಕರ ಅವರನ್ನು ರಕ್ಷಿಸಿದ್ದಾರೆ.

ಹೂ ತರಲು ಹೋಗಿದ್ದಾಗ ಭೂ ಕುಸಿತ... 14-15 ಅಡಿ ಆಳಕ್ಕೆ ಹೋದ ವೃದ್ಧ

ಸದ್ಯ ರತ್ನಾಕರ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ತನಿಖೆ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಘಟನೆಗೆ ಕಾರಣ?:

ಕಳೆದ ಕೆಲ ತಿಂಗಳುಗಳಿಂದ ನರಗುಂದ ಪಟ್ಟಣದಲ್ಲಿ ಸತತ ಮಳೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿದೆ. ಹೀಗಾಗಿ ಪಟ್ಟಣದಲ್ಲಿ ಹಿಂದಿನ ಕಾಲದ ಹಗೆಗಳು (ಧಾನ್ಯಗಳನ್ನು ಸಂಗ್ರಹಿಸಲು ನೆಲದಲ್ಲಿ ನಿರ್ಮಿಸಲಾಗುವ ಸಂಗ್ರಹಗಾರ) ಕುಸಿಯುತ್ತಿವೆ. ನರಗುಂದದ ಕಸಬಾ ಓಣಿಯಲ್ಲೂ ಇದೇ ರೀತಿ ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Intro:ಹೂ ಹರಿಯಲು ಹೋದ ವೃದ ಭೂಮಿಯೊಳಗೆ ಹೋದ.. ವಿಡಿಯೋ..

ಮುಂಜಾನೆ ದೇವರ ಪೂಜೆಗೆಂದು ಹೂ ಹರಿಯಲು ಹೋದ ವೃದ್ದನೊಬ್ಬ ಭೂಮಿಯಲ್ಲಿ ಕುಸಿದು ಪ್ರಾಣ ಅಪಾಯದಿಂದ ಪಾರಗಿರೋ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಈ ಘಟನೆ ನಡೆದಿದ್ದು ರತ್ನಾಕರ ದೇಶಪಾಂಡೆ ಅವರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ಅವರ ಮನೆಯ ಹಿತ್ತಲಿನ ಪ್ರದೇಶದಲ್ಲಿ ರತ್ನಾಕರ ದೇಶಪಾಂಡೆ ರವರು ದೇವರ ಪೂಜೆಗೆಂದು ಹೂಗಳನ್ನು ಹರಿಯಲು ಹಿತ್ತಲಿಗೆ ಹೊಗಿದ್ದರು. ದೀಡಿರನೆ ಭೂಮಿ ಕುಸಿದು ಸುಮಾರು 14-15 ಅಡಿ ಕಂದಕದಲ್ಲಿ ರತ್ನಾಕರ ದೇಶಪಾಂಡೆ ರವರು ಸಿಲುಕಿಕೊಂಡಿದ್ದರು ಮನೆಯವರು ಹಾಗೂ ಸ್ಥಳಿಕರು ಅವರನ್ನು ರಕ್ಷಣೆ ಮಾಡಿದ್ದಾರೆ ಸದ್ಯ ರತ್ನಾಕರ ದೇಶಪಾಂಡೆ ಅವರು ಪ್ರಾಣ ಅಪಾಯದಿಂದ ಪಾರಾಗಿದ್ದು ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಶ್ರೀ ಸಿ ಸಿ ಪಾಟೀಲ ಆಗಮಿಸಿ ಯೋಗಕ್ಷೇಮ ವಿಚಾರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರೊಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕ ಮಾಡಿದ್ದಾರೆ..

ಘಟನೆಗೆ ಕಾರಣ :- ಕಳೆದ ಕೆಲ ತಿಂಗಳುಗಳಿಂದ ನರಗುಂದ ಪಟ್ಟನದಲ್ಲಿ ಸತತ ಮಳೆ ಮತ್ತು ಅಂತರ್ಜಲ ಮಟ್ಟ ಹೆಚ್ಚು ಆಗಿದ್ದರಿಂದ ಪಟ್ಟಣದಲ್ಲಿ ಏಕಾಏಕಿಯಾಗಿ ಹಿಂದಿನ ಕಾಲದ ಹಗೆಗಳು ( ಕಂದಕಗಳು) ಕುಸಿಯುತ್ತಿದ್ದು ನರಗುಂದ ಶಹರದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣ ವಾಗುತ್ತಿದೆ. ನರಗುಂದ ಪಟ್ಟಣದ ಜನವಸತಿ ಪ್ರದೇಶದಲ್ಲಿಯೇ ಪ್ರತಿ ದಿನ ಎರಡರಿಂದ ಮೂರು ಹಗೆಗಳು ಕುಸಿಯುತ್ತಿದ್ದು ಜನರಲ್ಲಿ ಆತಂಕ ಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಯಲ್ಲಿ ಸೂಕ್ತ ಭೂ ವಿಜ್ಞಾನಿಗಳ ತಂಡ ಆಗಮಿಸಿ ವೈಜ್ಞಾನಿಕ ಸಮೀಕ್ಷೆ ಮಾಡಲು ಮೇಲಾಧಿಕಾರಿಗಳಿಗೆ ತನಿಖೆ ಮಾಡಲು ಸಚಿವ ಸಿಸಿ ಪಾಟೀಲ್ ತಿಳಿಸಿದ್ದಾರೆ...Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.