ಗದಗ: ಕಳೆದ 80 ವರ್ಷದಿಂದ ಮೂಲಸೌಕರ್ಯ ಸಮಸ್ಯೆ ಪರಿಹಾರ ಹಾಗೂ ಕಂದಾಯ ಗ್ರಾಮ ಅಂತ ಘೋಷಣೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಮುಂಡರಗಿ ತಾಲೂಕಿನ ಡಂಬಳ ಬಳಿಯ ನಾರಾಯಣಾಪುರ ಗ್ರಾಮವು ಕಳೆದ 80 ವರ್ಷಗಳಿಂದ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ. ಅಲ್ಲದೆ ಆ ಗ್ರಾಮವನ್ನು ಇದುವರೆಗೂ ಕಂದಾಯ ಗ್ರಾಮ ಅಂತ ಘೋಷಣೆ ಮಾಡಿಲ್ಲ. ನೀರಿನ ಕರ, ವಿದ್ಯುತ್ ಬಿಲ್ ಸೇರಿದಂತೆ ಎಲ್ಲ ಬಗೆಯ ತೆರಿಗೆಯನ್ನು ಕಟ್ಟಿಸಿಕೊಳ್ಳೋ ಸ್ಥಳೀಯ ಆಡಳಿತ ಮಾತ್ರ ನಾರಾಯಣಾಪುರ ಗ್ರಾಮವನ್ನು ಕಂದಾಯ ಗ್ರಾಮ ಅಂತ ಘೋಷಣೆ ಮಾಡೋ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನೋದು ಗ್ರಾಮಸ್ಥರ ಆರೋಪ.
ಎಲ್ಲಾ ಸಮಸ್ಯೆಗಳ ಬಗ್ಗೆ ಎಂಪಿ, ಎಂಎಲ್ಎ, ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ತಿಳಿಸಿದ್ರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸೋವರೆಗೂ ಎಲ್ಲಾ ಬಗೆಯ ಚುನಾವಣೆಯಲ್ಲಿ ಮತದಾನ ಮಾಡದಿರಲು ತೀರ್ಮಾನ ಮಾಡಲಾಗಿದೆ ಅಂತಾರೆ ಗ್ರಾಮದ ಜನ.