ETV Bharat / state

ಗ್ರಾಮದೇವತೆಯನ್ನೂ ಬಿಡದ ಕಳ್ಳರು; ಲಕ್ಷಾಂತರ ರೂ. ಚಿನ್ನಾಭರಣ ಲೂಟಿ - latest crime news

ದೇವಸ್ಥಾನಕ್ಕೆ ನುಗ್ಗಿದ ದರೋಡೆಕೋರರು ದೇವಿಯ ಮೈಮೇಲಿದ್ದ ಲಕ್ಷಾಂತರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

Jewelry theft in Gadag
ಕಳ್ಳತನವಾದ ದೇವಸ್ಥಾನ
author img

By

Published : Sep 11, 2020, 6:57 PM IST

ಗದಗ: ದೇವರ ಮೇಲಿನ ಲಕ್ಷಾಂತರ ರೂ.‌ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಹೆಸರೂರಿನಲ್ಲಿ ನಡೆದಿದೆ.‌ ಗ್ರಾಮದ ದ್ಯಾಮವ್ವ ದೇವಿಯ ಮೂರ್ತಿಗೆ ಹಾಕಲಾಗಿದ್ದ 1 ಲಕ್ಷ 14 ಸಾವಿರದ 500 ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ.

Jewelry theft in Gadag
ಕಳ್ಳತನವಾದ ದೇವಸ್ಥಾನ

ಬಂಗಾರದ ಬೋರಮಳ, ನೆಕ್ಲೆಸ್​, ಬೆಳ್ಳಿಯ ಕಾಲುಚೈನು, ಕಿರೀಟ, ಕಾಲ್ಗೆಜ್ಜೆ ಸೇರಿದಂತೆ ಮುಂತಾದ ಆಭರಣಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳರಿಗಾಗಿ ಶೋಧನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.