ಗದಗ : ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಸುಡುಗಾಡ ಸಿದ್ಧರ ಕುಟುಂಬಕ್ಕೆ ಜೈನ್ ಸೋಷಿಯಲ್ ಗ್ರೂಪ್ ಸದಸ್ಯರು ಫುಡ್ ಕಿಟ್ ನೀಡಿದರು.
ಲಾಕ್ಡೌನ್ನಿಂದ ಕೆಲಸ ಇಲ್ದೆ ಮನೆಯಲ್ಲೇ ಕೂತಿರೋ ಸುಡುಗಾಡು ಸಿದ್ಧರಿಗೆ ಅಗತ್ಯ ವಸ್ತುಗಳ ಖರೀದಿಗೂ ಹಣ ಇರಲಿಲ್ಲ. ಇದರಿಂದಾಗಿ ಬಡಾವಣೆಯ ಸುಮಾರು 75 ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ಧವು.
ಈ ವಿಚಾರ ಎಸ್ಪಿಎನ್ ಯತೀಶ್ ಅವರ ಗಮನಕ್ಕೆ ಬಂದಿದೆ. ಬಡ ಅಸಹಾಯಕ ಜನತೆಗೆ ಏನಾದರೂ ಸಹಾಯ ಮಾಡಬೇಕು ಅಂತ ಎಸ್ಪಿ ಅವರು ಜೈನ್ ಸಮುದಾಯದ ಯುವಕರನ್ನು ಕೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅವರ ಮನವಿಗೆ ಓಗೊಟ್ಟ ಸಮುದಾಯದ ಯುವಕರು, ಕುಟುಂಬವೊಂದಕ್ಕೆ ವಾರಕ್ಕಾಗುವ ದಿನಸಿ ಫುಡ್ ಕಿಟ್ ರೆಡಿ ಮಾಡಿ ನೀಡಿದ್ದಾರೆ.
ಜೊತೆಗೆ ಜೈನ್ ಸಮುದಾಯದ ಡಾಕ್ಟರ್ ಒಬ್ಬರು ಬಡಾವಣೆ ಜನರ ಆರೋಗ್ಯ ವಿಚಾರಿಸಿ ಸಾಮಾನ್ಯ ರೋಗಕ್ಕೆ ಔಷಧಿಗಳನ್ನೂ ಹಂಚಿದ್ದಾರೆ. ಯುವಕರ ಕೆಲಸಕ್ಕೆ ಬಡಾವಣೆ ಜನರು ಸೇರಿದಂತೆ ಎಸ್ಪಿ ಯತೀಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.