ಗದಗ: ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಆದ್ರೆ ಸಂಪ್ರದಾಯವನ್ನು ಬಿಡದ ಗ್ರಾಮೀಣ ಭಾಗದ ಜನರು ಯುಗಾದಿ ಅಂಗವಾಗಿ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಸ್ಥಾನದಕ್ಕೆ ಬಂದು ಹಬ್ಬ ಅಚರಿಸಿದ್ದಾರೆ.
ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದಂದು ದೇವಸ್ಥಾನದ ಆವರಣದಲ್ಲಿ ಸಸಿ ಹುಡುಕುವ ಸಂಪ್ರದಾಯವಿದೆ. ದೇವಸ್ಥಾನದ ಆವರಣದಲ್ಲಿ ಯಾವ ಸಸಿ ಹೆಚ್ಚಾಗಿ ಸಿಗುತ್ತವೆಯೋ, ಆ ಸಸಿಗಳನ್ನು ಬೆಳೆದರೆ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆಯಾಗಿದೆ.
ತಲೆ-ತಲಾಂತರದಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಬಾರಿ ಹತ್ತಿ, ಜೋಳ, ಗೋಧಿ ಸಿಕ್ಕಿದ್ದು, ಮುಂದಿನ ವರ್ಷ ಅದೇ ಬೆಳೆಯನ್ನುಈ ಭಾಗದ ಜನರು ಬೆಳೆಯಲಿದ್ದಾರೆ.