ಗದಗ : ಹೋಳಿ ಹಬ್ಬದಂದು ಕಾಮ ರತಿಗೆ ಸುಮಾರು 20 ಕೆ.ಜಿ.ಗೂ ಅಧಿಕ ಬಂಗಾರದ ಆಭರಣ ಧರಿಸಿ ಪೂಜಿಸುವ ವಿಶಿಷ್ಟ ಸಂಪ್ರದಾಯವೊಂದು ಸುಮಾರು 153 ವರ್ಷಗಳಿಂದ ನಗರದಲ್ಲಿ ನಡೆದುಕೊಂಡು ಬಂದಿರುವುದು ಮುದ್ರಣ ಕಾಶಿಯಲ್ಲಿ ವಿಶೇಷವಾಗಿದೆ.
ನಗರದ ಕಿಲ್ಲಾ ಓಣಿಯಲ್ಲಿ ಬಂಗಾರದ ರತಿ ಮನ್ಮಥರನ್ನ ಪ್ರತಿಷ್ಠಾಪಿಸಲಾಗಿದ್ದು,ಇದು ಸುಮಾರು 153 ವರ್ಷಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಪ್ರತಿ ವರ್ಷ ಸುಮಾರು 20 ಕೆಜಿಗೂ ಅಧಿಕ ಬಂಗಾರದ ಆಭರಣಗಳನ್ನು ಕಾಮ ರತಿಗೆ ಧರಸಿ ಅಲಂಕಾರ ಮಾಡಿ ಅದ್ದೂರಿಯಾಗಿ ರಾತ್ರಿ ಮೆರವಣಿಗೆ ಮಾಡಲಾಗುತ್ತದೆ.
ಮನೆಯಲ್ಲಿರುವ ಹಾಗೂ ಮಹಿಳೆಯರ ಮೈಮೇಲಿರುವ ಬಂಗಾರವನ್ನು ರತಿಗೆ ನೀಡಿದ್ರೆ ಬರುವ ವರ್ಷದಲ್ಲಿ ಬಂಗಾರ ದ್ವಿಗುಣವಾಗುತ್ತದೆ ಎಂಬ ನಂಬಿಕೆ ನಗರ ನಿವಾಸಿಗಳದ್ದು. ಅಲ್ಲದೆ ರತಿ ಕಾಮರಿಗೆ ಹರಕೆ ಹೊತ್ತುಕೊಂಡರೆ ಬಯಸಿದ್ದನ್ನೆಲ್ಲವೂ ಈಡೇರುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ.