ETV Bharat / state

ಸರ್ಕಾರದ ಧನ ಸಹಾಯದಿಂದ ನಾವು ವಂಚಿತರಾಗುತ್ತಿದ್ದೇವೆ: ಗದಗ ಆಟೋ ಚಾಲಕರ ಅಳಲು - ಗದಗ ಆಟೋ ಚಾಲಕರ ಸಮಸ್ಯೆ

ಸರ್ಕಾರದ ಪರಿಹಾರಧನ ಪಡೆಯುವ ಸಲುವಾಗಿ ಬ್ಯಾಡ್ಜ್​​, ಲೈಸೆನ್ಸ್​​ಗಾಗಿ ಕಳೆದ ಗುರುವಾರದಂದು ಅರ್ಜಿ ಹಾಕಿದ ಆಟೋ ಚಾಲಕರಿಗೆ ಮಾತ್ರ ಬ್ಯಾಡ್ಜ್​, ಲೈಸೆನ್ಸ್ ಸಿಕ್ಕಿದೆ. ಕೇವಲ 25%ರಷ್ಟು ಜನಕ್ಕೆ ಸಿಕ್ಕಿದ್ದು, ಇವರು ಮಾತ್ರ ಮೂರು ಸಾವಿರ ರೂ. ಪರಿಹಾರಧನ ಪಡೆಯಲು ಅರ್ಹರಾಗಿದ್ದಾರೆ. ಉಳಿದ ಶೇ. 75ರಷ್ಟು ಚಾಲಕರು ವಂಚಿತರಾಗಿದ್ದೇವೆಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

gadag auto drivers problem
ಗದಗ ಆಟೋ ಚಾಲಕರು
author img

By

Published : Jun 15, 2021, 9:11 AM IST

ಗದಗ: ಸರ್ಕಾರ ಕೊರೊನಾ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೀಡಾದ ಜನರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಪ್ಯಾಕೇಜ್ ಮೇಲೆ ಪ್ಯಾಕೇಜ್ ಘೋಷಣೆ ಮಾಡ್ತಿದೆ. ಆದರೆ ಪರಿಹಾರ ಧನವನ್ನು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಗದಗದಲ್ಲಿ ಉದ್ಭವ ಆಗಿದೆ.

ಹೌದು, ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಧನ ಸಹಾಯ ಪಡೆಯಲು ಗದಗದಲ್ಲಿ ಸಾವಿರಾರು ಆಟೋ ಚಾಲಕರು ಪರದಾಟ ನಡೆಸಿದ್ದಾರೆ.

ಗದಗ ಆರ್‌ಟಿಒ ಕಚೇರಿ ಬಳಿ ಜಮಾಯಿಸಿರುವ ಸಾವಿರಾರು ಆಟೋ ಚಾಲಕರು, ಸರ್ಕಾರದ ಧನ ಸಹಾಯದಿಂದ ನಾವು ವಂಚಿತರಾಗುತ್ತಿದ್ದೇವೆಂದು ಅಳಲು ತೋಡಿಕೊಂಡರು. ಬ್ಯಾಡ್ಜ್​, ಲೈಸೆನ್ಸ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದ ಜಿಲ್ಲಾಡಳಿತವೀಗ ದಿಢೀರ್ ರದ್ದು ಮಾಡಿ ಅನ್ಯಾಯವೆಸಗಿದೆ ಅಂತಾ ಆಟೋ ಚಾಲಕರು ಕಣ್ಣೀರು ಹಾಕಿದ್ದಾರೆ.

ಪರಿಹಾರ ಧನ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿರುವ ಗದಗ ಆಟೋ ಚಾಲಕರು

ಕಳೆದ ಒಂದು ವಾರದಿಂದ ಮನೆಯಿಂದ ಕಚೇರಿ, ಕಚೇರಿಯಿಂದ ಮನೆಗೆ ಅಲೆದಾಡಿ ಸುಸ್ತಾಗಿದ್ದಾರೆ. ಅಂದಹಾಗೆ ಈ ಮೊದಲು ಕೇಂದ್ರ ಸರ್ಕಾರ ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್​​​ ಅವಶ್ಯಕತೆ ಇಲ್ಲ ಎಂದಿದ್ದಕ್ಕೆ ಅದನ್ನು ಮಾಡಿಸಿರಲಿಲ್ಲ. ಆದರೀಗ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಧನ ಸಹಾಯ ಪಡೆಯಲು ಅರ್ಜಿ ಕಾಲಂನಲ್ಲಿ ಬ್ಯಾಡ್ಜ್,​ ಲೈಸೆನ್ಸ್ ಕೇಳ್ತಿದೆ. ಇದರಿಂದ ಬ್ಯಾಡ್ಜ್​,​​ ಲೈಸೆನ್ಸ್ ಇಲ್ಲದವರು ಪರದಾಡುವಂತಾಗಿದೆ.

ಇನ್ನು ಈ ಸಂಬಂಧ ಜಿಲ್ಲಾಧಿಕಾರಿಗಳು ಬ್ಯಾಡ್ಜ್,​ ಲೈಸೆನ್ಸ್ ಪಡೆಯಲು ಎರಡು ದಿನಗಳ ಕಾಲ ಮಾತ್ರ ಅವಕಾಶ ಕೊಟ್ಟಿದ್ದರು. ಆದರೆ ಎರಡು ದಿನದಲ್ಲಿ ಕೆಲವೇ ಕೆಲವು ಜನರಿಗೆ ಬ್ಯಾಡ್ಜ್​​, ಲೈಸೆನ್ಸ್ ಸಿಕ್ಕಿದೆ. ಈಗ ಕಾಲಾವಕಾಶ ಮುಗಿದಿದೆ ಅಂತಾ ಉಳಿದವರನ್ನು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಗದಗ ತಾಲೂಕಿನ ಮಲ್ಲಸಮುದ್ರದ ಬಳಿ ಇರುವ ಆರ್​​ಟಿಒ ಕಚೇರಿ ಬಳಿ ಸಾವಿರಾರು ಜನ ಆಟೋ ಚಾಲಕರು ಜಮಾಯಿಸಿದ್ದು, ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಪುನಃ ಆದೇಶ ಮಾಡುವವರೆಗೆ ನಿಮಗೆ ಬ್ಯಾಡ್ಜ್​, ಲೈಸೆನ್ಸ್​​ ಕೊಡೋದಿಲ್ಲ ಅಂತಾ ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಅಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು ಜನ ಆಟೋ ಚಾಲಕರಿದ್ದು, ಹೆಚ್ಚಿನವರದ್ದು ಇದೇ ಸಮಸ್ಯೆಯಾಗಿದೆ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಬ್ಯಾಡ್ಜ್,​ ಲೈಸೆನ್ಸ್ ಪಡೆಯಲು ಅನುಮತಿ ಕೊಡಬೇಕು ಅಂತಾ ಚಾಲಕರು ಒತ್ತಾಯ ಮಾಡಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಮತ್ತು ಜಿಲ್ಲಾಧಿಕಾರಿ ಸುಂದರೇಶಬಾಬು, ಇನ್ನಷ್ಟು ದಿನ ವಿಸ್ತರಣೆ ಮಾಡಿ ಧನ ಸಹಾಯ ಪಡೆಯಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಬಕಾರಿ ಪರವಾನಗಿ ನವೀಕರಣ ಶುಲ್ಕ ಕಂತು ಕಟ್ಟಲು ಅವಧಿ ವಿಸ್ತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.