ಗದಗ: ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಡೆದಿದೆ.
ರೈತ ಮಲ್ಲಪ್ಪ ಯಲ್ಲಪ್ಪ ಗಿರಿಯಪ್ಪನವರ (55) ಮೃತ ದುರ್ದೈವಿ. ಹೊಲಕ್ಕೆ ಬೀಜ ಮತ್ತು ಗೊಬ್ಬರ ಖರೀದಿಸುವ ಸಲುವಾಗಿ ವಿಜಯ ಬ್ಯಾಂಕ್ ಕೊಣ್ಣೂರು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ 1,55,000/- ರೂ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಪ್ರವಾಹದಿಂದಾಗಿ ತಾನು ಬೆಳೆದ ಬೆಳೆ ನೀರುಪಾಲಾಗಿತ್ತು. ಈ ಕಾರಣದಿಂದ ಮನನೊಂದ ರೈತ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೃತನ ಪತ್ನಿ ದ್ಯಾಮವ್ವ ನರಗುಂದ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.