ETV Bharat / state

ಗದಗದಲ್ಲಿ ವಿಷಪ್ರಾಶನದಿಂದ 62 ಕುರಿಗಳ ಸಾವು

ಸಾಯಂಕಾಲ ಚೆನ್ನಾಗಿಯೇ ಇದ್ದ ಕುರಿಗಳು ಬೆಳಗ್ಗೆದ್ದು ನೋಡುವಾಗ ಸತ್ತು ಬಿದ್ದಿರುವ ಘಟನೆ ಗದಗ ಗಜೇಂದ್ರಗಡ ತಾಲೂಕಿನಲ್ಲಿ ನಡೆದಿದ್ದು, ವಿಷಪ್ರಾಶನದಿಂದ ಕುರಿಗಳು ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.

author img

By

Published : May 14, 2020, 1:26 PM IST

death of 62 sheep from poisoning at Gadag
ವಿಷಪ್ರಾಶನದಿಂದ ಕುರಿಗಳ ಸಾವು

ಗದಗ : ವಿಷಪ್ರಾಶನದಿಂದ 62 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂಡ್ರಗಡ ತಾಲೂಕಿನ ನರೇಗಲ್ ಬಳಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಿದ್ದಪ್ಪ ಪೂಜಾರಿ, ದೇವರಾಜ್, ಅಜಿತ್ ಎಂಬುವವರಿಗೆ ಸೇರಿದ ಕುರಿಗಳು ಇವಾಗಿದ್ದು, ಜೋಳದ ಚಿಗುರು ತಿಂದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸಾಯಂಕಾಲ ಚೆನ್ನಾಗಿಯೇ ಇದ್ದ ಕುರಿಗಳು ಬೆಳಗ್ಗೆದ್ದು ನೋಡುವಾಗ ಸತ್ತು ಬಿದ್ದಿದ್ದವು. ಮಕ್ಕಳಂತೆ ಸಾಕಿದ್ದ ಕುರಿಗಳು ಕಣ್ಣೆದುರೆ ಸತ್ತು ಬಿದ್ದಿದ್ದನ್ನು ನೋಡಿ ಕುರಿಗಳ ಮಾಲೀಕರು ಕಣ್ಣೀರಿಟ್ಟಿದ್ದಾರೆ.

ಸಾಮೂಹಿಕವಾಗಿ ಸತ್ತು ಬಿದ್ದಿರುವ ಕುರಿಗಳು

ಸ್ಥಳಕ್ಕೆ ನರೇಗಲ್ ಪಶು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕುರಿಗಳನ್ನು ಬಾಗಲಕೋಟೆ ಪಶು ಸಂಗೋಪನಾ‌ ಮತ್ತು ಜೈವಿಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.