ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾನುವಾರ ನಡೆದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಅಮೋಘ ಜಯ ದಾಖಲಿಸಿತು. ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಯುವ ವೇಗಿ ಮಯಾಂಕ್ ಯಾದವ್, ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನದ ಮೂಲಕ ವಿಶೇಷ ದಾಖಲೆಯ ಕ್ಲಬ್‌ಗೆ ಸೇರ್ಪಡೆಗೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಭರ್ಜರಿ ಬೌಲಿಂಗ್ ತೋರಿದ್ದ ಮಯಾಂಕ್ ಗಾಯದ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. 22ರ ಹರೆಯದ ಯುವ ಬೌಲರ್ ಮೊದಲ ಬಾರಿಗೆ ಭಾರತ ತಂಡದ ಜರ್ಸಿಯಲ್ಲಿ ಮೈದಾನಕ್ಕಿಳಿದರು. ಪವರ್‌ಪ್ಲೇಯ ಅಂತಿಮ ಓವರ್‌ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಚೆಂಡನ್ನು ಮಯಾಂಕ್ ಕೈಗಿತ್ತರು. ತಮ್ಮ ಚೊಚ್ಚಲ ಓವರ್‌ನಲ್ಲಿ ವೇಗ ಮತ್ತು ನಿಖರತೆ ಕಾಯ್ದುಕೊಂಡ ಮಯಾಂಕ್, ಮೇಡನ್ ಓವರ್ ಮಾಡುವಲ್ಲಿ ಸಫಲರಾದರು. ಬ್ಯಾಟರ್ ತೌಹಿದ್ ಹೃದಯ್ ಒಂದೇ ಒಂದು ರನ್ ಗಳಿಸಲು ವಿಫಲವಾದರು. ಇದರಿಂದ ಟಿ20 ಮಾದರಿಯಲ್ಲಿ ತಾವಾಡಿದ ಮೊದಲ ಓವರ್‌ನಲ್ಲೇ ಮೇಡನ್ ಮಾಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಯಾಂಕ್ ಪಾತ್ರರಾದರು.
Hardik Pandya finishes off in style in Gwalior 💥#TeamIndia win the #INDvBAN T20I series opener and take a 1⃣-0⃣ lead in the series 👌👌
— BCCI (@BCCI) October 6, 2024
Scorecard - https://t.co/Q8cyP5jXLe@IDFCFIRSTBank pic.twitter.com/uYAuibix7Q
ಐಪಿಎಲ್ ಬಳಿಕ ಮತ್ತೊಮ್ಮೆ ವೇಗದ ಮೂಲಕ ಅಲೆ ಎಬ್ಬಿಸಿದ ಮಯಾಂಕ್, ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 5.20ರ ಎಕಾನಮಿಯಲ್ಲಿ 21 ರನ್ ನೀಡಿ ಒಂದು ವಿಕೆಟ್ ಕಿತ್ತರು. ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಮಹಮ್ಮದುಲ್ಲಾ ಅವರ ಮೊದಲ ಟಿ20 ಬಲಿಯಾದರು. ಮೊದಲ ಓವರ್‌ನಲ್ಲಿ 146.1 ಕಿ.ಮೀ ವೇಗದ ಎಸೆತದೊಂದಿಗೆ ಗ್ವಾಲಿಯರ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ಮಯಾಂಕ್ ಜೊತೆಗೆ ಬೌಲಿಂಗ್ನಲ್ಲಿ ಅರ್ಶದೀಪ್ ಸಿಂಗ್ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ ಮಿಂಚಿನ ದಾಳಿ ನಡೆಸಿ, ತಲಾ ಮೂರು ವಿಕೆಟ್ ಪಡೆದರು. ಕರಾರುವಾಕ್ ಬೌಲಿಂಗ್ಗೆ ಸಿಲುಕಿದ ಬಾಂಗ್ಲಾ ತಂಡ 127 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 11.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು
ಮೊದಲ ಓವರ್ ಮೇಡನ್ ಮಾಡಿದವರು: ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ 2006ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಓವರ್ ಮೇಡನ್ ಮಾಡಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದರು. ಆ ಬಳಿಕ 2022ರಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮುಖಾಮುಖಿಯಲ್ಲಿ ಎಡಗೈ ವೇಗಿ ಅರ್ಶದೀಪ್ ಈ ದಾಖಲೆ ಬರೆದ ಎರಡನೇ ಭಾರತೀಯರಾಗಿದ್ದಾರೆ.
ಇದನ್ನೂ ಓದಿ: T20 ಸರಣಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 7 ವಿಕೆಟ್ಗಳ ಭರ್ಜರಿ ಜಯ - India vs Bangladesh