ETV Bharat / state

ಗವಾಯಿಗಳ ಆಶ್ರಮದ ವಿದ್ಯಾರ್ಥಿಯ ಕುಂಚದಲ್ಲಿ ಅರಳಿತು ಅದ್ಭುತ ಕಲ್ಪನೆ - ಗದಗ ಲೆಟೆಸ್ಟ್ ನ್ಯೂಸ್

ಪಂಚಾಕ್ಷರಿ ಗವಾಯಿಗಳ ಆಶ್ರಮದ ಸಂಗೀತದ ವಿದ್ಯಾರ್ಥಿಯೊಬ್ಬ ಕೊರೊನಾ‌ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎರಡು ‌ಅದ್ಭುತ ಶಕ್ತಿಗಳ‌ ಚಿತ್ರಗಳನ್ನು ಬಿಡುಸುವ ಮೂಲಕ ಗಮನ ಸೆಳೆದಿದ್ದಾನೆ.

Corona awareness painting in gadaga ashrama
ಕೊರೊನಾ ಜಾಗೃತಿ: ಪಂಚಾಕ್ಷರಿ ಗವಾಯಿಗಳ ಆಶ್ರಮದ ವಿದ್ಯಾರ್ಥಿಯ ಕುಂಚದಲ್ಲಿ ಅರಳಿತು ಅದ್ಭುತ ಕಲ್ಪನೆ
author img

By

Published : May 26, 2020, 5:54 PM IST

ಗದಗ: ಪಂಚಾಕ್ಷರಿ ಗವಾಯಿಗಳ ಆಶ್ರಮದ ಸಂಗೀತದ ವಿದ್ಯಾರ್ಥಿಯೊಬ್ಬ ಕೊರೊನಾ‌ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎರಡು ‌ಅದ್ಭುತ ಶಕ್ತಿಗಳ‌ ಚಿತ್ರಗಳನ್ನು ಬಿಡುಸುವ ಮೂಲಕ ಗಮನ ಸೆಳೆದಿದ್ದಾನೆ.

ಕೊರೊನಾ ಭೀತಿಯಿಂದ ಇಡೀ ದೇಶವೇ ನಲುಗುತ್ತಿದ್ದು, ದಿನೇ-ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇತ್ತ ಸರ್ಕಾರವೂ ಸೂಕ್ತ ಕ್ರಮ ಕೈಗೊಂಡಿದೆ. ಆದರೂ ದೇಶ ಸಂಪೂರ್ಣ ಕೊರೊನಾ ಮುಕ್ತವಾಗಿಲ್ಲ. ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಅಡಗಿರುವ ವಿಷಯ ಒಂದಾದರೆ, ದೈವಿ ಶಕ್ತಿ ನಂಬುವವರ ಸಂಖ್ಯೆಯೂ ಹೆಚ್ಚು.

ಕೊರೊನಾ‌ ನಿಯಂತ್ರಣಕ್ಕೆ ಜಾಗೃತಿ

ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳು ಮತ್ತು ಗದಗನ ಶ್ರೀ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರು ಎಂದೇ ಹೆಸರು ಮಾಡಿದ್ದರು. ಹಾಗಾಗಿ ಈ ಎರಡು ಮಹಾನ್ ದಿವ್ಯ ಚೇತನರ ಆಶೀರ್ವಾದದಿಂದ ದೇಶ ಕೊರೊನಾ ಮುಕ್ತವಾಗಲಿದೆ ಅನ್ನೋ ಕಲ್ಪನೆಯಲ್ಲಿ ಆಶ್ರಮದ ವಿದ್ಯಾರ್ಥಿ ಅನಿಲ್ ಪವಾರ್ ಚಿತ್ರ ಬಿಡಿಸಿದ್ದಾರೆ.

ಯುವಕನ ಹಿನ್ನಲೆ: ಅನಿಲ್ ಪವಾರ್ ಎಂಬ ವಿದ್ಯಾರ್ಥಿ ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಂಗ್ಲಿ ರಾಂಪೂರ ತಾಂಡದ ನಿವಾಸಿ. 2 ವರ್ಷಗಳಿಂದ ಗದಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮದಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಈ ಮೊದಲು 8 ವರ್ಷಗಳಿಂದ ಚಿತ್ರ (ಚಿತ್ರಕಲೆ) ಬಿಡಿಸುತ್ತಿದ್ದರು. ಸದ್ಯ ಪ್ರಧಾನಿ ಮೋದಿ ನೀಡಿರುವ ಕೆರೆಗೆ ತನ್ನದೇಯಾದ ಕಲ್ಪನೆಯ ಮೂಲಕ‌ ಚಿತ್ರ ಬಿಡಿಸಿ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರದ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲರೂ ಮನೆಯಲ್ಲಿರಿ, ಸರ್ಕಾರ ಕೈಗೊಂಡಿರೋ ಕ್ರಮವನ್ನ ಎಲ್ಲರೂ ಚಾಚು ತಪ್ಪದೇ ಪಾಲಿಸೋಣವೆಂದು ಕಲಾವಿದ ಅನಿಲ್​​​​ ಪವಾರ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ. ಇನ್ನು ಇವರು ಕೊರೊನಾ ಜಾಗೃತಿಗೆ ಬಿಡಿಸುತ್ತಿರುವ ಚಿತ್ರಗಳು ಎಲ್ಲೆಡೆ ವೈರಲ್ ಆಗಿ ಪ್ರಂಶಸಗೆ ಪಾತ್ರವಾಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.