ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ತಮಗೆ ಬೇಕಾದ ಜಾತಿ ಪ್ರಮಾಣಪತ್ರ ಸಿಗಲಿಲ್ಲ ಅನ್ನೋ ಕಾರಣಕ್ಕೆ ತಹಶೀಲ್ದಾರ ಸೇರಿದಂತೆ ನಾಲ್ಕು ಜನ ಕಂದಾಯ ಅಧಿಕಾರಿಗಳ ಮೇಲೆ ಕೆಲ ಜನರು ಸೇರಿ ಜಾತಿ ನಿಂದನೆ ಕೇಸ್ ಹಾಕಿದ್ದಾರೆ.
ಇದರಿಂದ ಬೇಸರಗೊಂಡ ತಹಶೀಲ್ದಾರ ಹಾಗೂ ಕಂದಾಯಾಧಿಕಾರಿಗಳು, ಅರ್ಜಿದಾರರು ತಮ್ಮ ಜಾತಿಯ ಪ್ರಮಾಣಪತ್ರವನ್ನ ಕೇಳದೇ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೇಳ್ತಿದ್ದಾರೆ. ಅಲ್ಲದೇ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಅಂತಾ ತಮ್ಮ ಕಚೇರಿ ಬಂದ್ ಮಾಡಿ ಗದಗ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದ ಕೆಲ ಜನರು ಕಳೆದ ಕೆಲ ದಿನಗಳಿಂದ ತಮಗೆ ಗಂಟಿಚೋರ್ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿ ಅಂತಾ ಲಕ್ಷ್ಮೇಶ್ವರ ತಹಶೀಲ್ದಾರ ಕಚೇರಿಗೆ ಅಲೆದಾಡ್ತಿದ್ದಾರೆ. ಅಲ್ಲದೇ ಈ ಕುರಿತು ಈ ಹಿಂದೆ ಪ್ರತಿಭಟನೆ ಕೂಡಾ ಮಾಡಿದ್ದಾರೆ. ಆದ್ರೆ ಆ ಜನರ ಕೋರಿಕೆಯ ಮೇರೆಗೆ ಅವರು ಪರಿಶಿಷ್ಟ ಜಾತಿಯ ಜನಾಂಗದವರಲ್ಲ. ಬದಲಾಗಿ ಗಿರಣಿ ವಡ್ಡರ್ ಅನ್ನೋ ಜಾತಿಗೆ ಅವರೆಲ್ಲ ಸೇರಿದ್ದಾರೆ ಅಂತಾ ಈವರೆಗೂ ಅಲ್ಲಿನ ತಹಶೀಲ್ದಾರರು ಕಾನೂನಿನ ಚೌಕಟ್ಟಿನಲ್ಲಿ ನಡೆದು, ಆ ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿಲ್ಲ.
ಅಲ್ಲದೇ ಖುದ್ದು ತಹಶೀಲ್ದಾರರೇ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದವರ ಹಾಗೂ ಅರ್ಜಿದಾರರ ತಂದೆ ಹಾಗೂ ತಾತನ ಶಾಲಾ ಪ್ರಮಾಣಪತ್ರ ಪರಿಶೀಲಿಸಿದಾಗ ಅದ್ರಲ್ಲಿ ಅರ್ಜಿದಾರರು ವಡ್ಡರ ಜಾತಿಗೆ ಸೇರಿದ್ದಾಗಿ ಕಂಡು ಬಂದಿದೆ. ಈ ವಿಚಾರವನ್ನ ಅರ್ಜಿದಾರರಿಗೆ ತಿಳಿಸಿದರೂ ಕೂಡಾ ಅವರು ಪದೇ ಪದೇ ತಹಶೀಲ್ದಾರ ಕಚೇರಿಗೆ ಬಂದು ಅಧಿಕಾರಿಗಳಿಗೆ ತೊಂದ್ರೆ ಕೊಡ್ತಿದ್ರು ಅನ್ನೋ ಕಾರಣಕ್ಕೆ ತಹಶೀಲ್ದಾರು ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದ್ದಾರೆ ಅನ್ನೋ ವಿಚಾರ ಇಟ್ಕೊಂಡು ಕೇಸ್ ಮಾಡಿದ್ದಾರೆ.
ಇದಕ್ಕೆ ಪರ್ಯಾಯವಾಗಿ ಮತ್ತೆ ಕಚೇರಿಗೆ ಬಂದ ಅರ್ಜಿದಾರರಾದ ಅನಂತ್ ಕಟ್ಟಿಮನಿ, ಮಲ್ಲೇಶಪ್ಪ ಚಪ್ಪರಮನಿ, ಹನುಮಪ್ಪ, ಸಾಲಿ, ರಾಮೇಶಪ್ಪ ಮುತ್ನಾಳ್ ಮತ್ತೆ ಗಲಾಟೆ ಮಾಡಿ ತಹಶೀಲ್ದಾರ ಸೇರಿದಂತೆ ನಾಲ್ವರು ಕಂದಾಯಾಧಿಕಾರಿಗಳ ವಿರುದ್ಧವೇ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.