ಗದಗ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 61 ವರ್ಷದ ವೃದ್ಧನೊಬ್ಬ( P-912) ಗುಣಮುಖರಾಗಿದ್ದು, ಇಲ್ಲಿನ ಜಿಮ್ಸ್ ಕೊರೊನಾ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ನಗರದ ಗಂಜಿ ಬಸವೇಶ್ವರದ ಈ ವೃದ್ದನನ್ನು ಏ. 30 ರಂದು ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇವರಿಗೆ ಸಹೋದರನಿಂದ (P-504) ಸೋಂಕು ತಗುಲಿರುವುದಾಗಿ ದೃಢಪಟ್ಟಿತ್ತು.
ಡಿಸ್ಚಾರ್ಜ್ ವೇಳೆ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಆತನನ್ನು ಹೊರ ಕರೆತಂದರು. ನಂತರ ಮಾಸ್ಕ್, ಸ್ಯಾನಿಟೈಸರ್, ಆಹಾರ ಕಿಟ್ ನೀಡಿ ಗೌರವಿಸಲಾಯಿತು.
ಮೇ 14 ಮತ್ತು 15 ರಂದು ಎರಡು ಬಾರಿ ಗಂಟಲು ದ್ರವ ಮಾದರಿ ಪರೀಕ್ಷಿಸಿದಾಗ ನೆಗೆಟಿವ್ ಕಂಡು ಬಂದಿದ್ದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ವೃದ್ಧನನ್ನು ಮನೆಗೆ ಕಳುಹಿಸಿಕೊಡಲಾಯಿತು. ಸದ್ಯ ಗದಗ ಜಿಲ್ಲೆಯಲ್ಲಿ ಇನ್ನು 6 ಪಾಸಿಟಿವ್ ಕೇಸ್ ಹೊಂದಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.