ಗದಗ : ಇಂದು ನಗರದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚ ಪಡೆಯುತ್ತಿದ್ದ ಮೂವರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ನಿಮಗದ ಮ್ಯಾನೇಜರ್ ಎಚ್. ವೈ. ರುದ್ರಾಕ್ಷಿ, ಡ್ರೈವರ್ ಫಕ್ಕೀರೇಶ್ ಪೂಜಾರ ಹಾಗೂ ಮಧ್ಯವರ್ತಿ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲೀಕ ಪ್ರತೀಕ್ ಬೇವಿನಕಟ್ಟಿ ಎಂಬುವರು ಎಸಿಬಿ ಬಂಧಿಸಿದೆ.
ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದ ಜಮೀನಿನ ವ್ಯವಹಾರದ ವಿಷಯವಾಗಿ ಹಣ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ನಿಗಮದ ಮ್ಯಾನೇಜರ್ ತನ್ನ ಕಾರ್ ಡ್ರೈವರ್ ಫಕ್ಕೀರೇಶ್ ಪೂಜಾರ ಹಾಗೂ ಮಧ್ಯವರ್ತಿ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲೀಕ ಪ್ರತಿಕ್ ಬೇವಿನಕಟ್ಟಿಯವರ ಮೂಲಕ ಲಂಚ ಸ್ವೀಕಾರ ಮಾಡುವ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಮಂಜುನಾಥ್ ಸಜ್ಜನ ಎಂಬುವವರು ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಹದ್ದಿನಲ್ಲಿದ್ದ ತಮ್ಮ 20 ಎಕರೆ ಜಮೀನನ್ನು 1 ಕೋಟಿಗೂ ಅಧಿಕ ಹಣಕ್ಕೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದರು. ಮಂಜುನಾಥ್ ಅವರಿಗೆ ಈಗಾಗಲೇ ನಿಗಮದಿಂದ 90 ಲಕ್ಷ ರೂ. ಹಣ ಸಂದಾಯವಾಗಿತ್ತು. ಉಳಿದ ಕೊಡಲು ನಿಗಮದ ಮ್ಯಾನೇಜರ್ ಎಚ್. ವೈ.ರುದ್ರಾಕ್ಷಿ 40 ಸಾವಿರ ರೂ ಲಂಚ ಕೇಳಿದ್ದರು.
ಇಂದು ಫಿರ್ಯಾದಿ ಮಂಜುನಾಥ್ ಸಜ್ಜನ ಹಣ ಕೊಡಲು ಬಂದಾಗ ಡ್ರೈವರ್ ಫಕ್ಕೀರೇಶ್ ನ ಬಳಿ ಕೊಡಿ ಎಂದಿದ್ದಾರೆ. ಫಕ್ಕೀರೇಶ್ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲೀಕ ಪ್ರತೀಕ್ ಬೇವಿನಕಟ್ಟಿ ಹತ್ತಿರ ಕೊಡಲು ಹೇಳಿದ್ದಾನೆ. ಪ್ರತೀಕ್ ಹಣ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಎನ್ ನೇತೃತ್ವದಲ್ಲಿ ದಾಳಿ ಮಾಡಿದ ಎಸಿಬಿ ಸಿಬ್ಬಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಎಸಿಬಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.