ETV Bharat / state

ಧಾರವಾಡ : ರೌಡಿಗಳಿಂದ ಮಾಲೀಕನನ್ನು ಉಳಿಸಲು ತನ್ನ ಪ್ರಾಣ ಲೆಕ್ಕಿಸದೆ ಕಾದಾಡಿದ ನಾಯಿ.. - ವಿದ್ಯಾಗಿರಿ ಪೊಲೀಸ್ ಠಾಣೆ

ನಾಲ್ಕೈದು ಜನರ ತಂಡವೊಂದು ಏಕಾಏಕಿ ರಾಡ್ ಹಾಗೂ ಬಡಿಗೆಗಳಿಂದ ಹಲ್ಲೆ ಮಾಡಿದೆ. ಇದರಿಂದ ಯುವಕನ ತಲೆ, ಕೈ ಹಾಗೂ ಕಾಲಿನ ಭಾಗಗಳಿಗೆ ಪೆಟ್ಟಾಗಿದೆ.

halle
halle
author img

By

Published : Jun 9, 2020, 3:46 PM IST

ಧಾರವಾಡ: ಯುವಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ಮಾಡಿದ ಪ್ರಕರಣ ಲಕ್ಷ್ಮಿಸಿಂಗನಕೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಶಿವು ಲಮಾಣಿ ಎಂಬ ಯುವಕನ ಮೇಲೆ ನಾಲ್ಕೈದು ಜನರ ತಂಡವೊಂದು ಏಕಾಏಕಿ ರಾಡ್ ಹಾಗೂ ಬಡಿಗೆಗಳಿಂದ ಹಲ್ಲೆ ಮಾಡಿದೆ. ಇದರಿಂದ ಯುವಕನ ತಲೆ, ಕೈ ಹಾಗೂ ಕಾಲಿನ ಭಾಗಗಳಿಗೆ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯುವಕನ ಮೇಲೆ ಹಲ್ಲೆ ಮಾಡಿದ ಪುಂಡರ ಗುಂಪು..

ತನ್ನ ಮಾಲೀಕನ ಮೇಲೆ ಹಲ್ಲೆ ಮಾಡುವವರ ಮೇಲೆ ಅಚ್ಚರಿ ಅನ್ನೋವಂತೆ ನಾಯಿ ದಾಳಿ ಮಾಡಿದೆ. ಆ ಮೂಲಕ ತನ್ನ ಮಾಲೀಕನನ್ನು ಬಿಡಿಸಲು ಪ್ರಯತ್ನಿಸಿದೆ. ಆದರೆ, ಆ ನಾಯಿ ಮೇಲೂ ಯುವಕರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.