ETV Bharat / state

ನಾವೀಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು?: ಡಿಕೆಶಿಗೆ ಸುಧಾಕರ್ ಟಾಂಗ್​ - dr. k Sudhakar talks about vaccine at Hubballi

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರು ಘರ್ ವಾಪಸಿ ಅಗಲಿದ್ದಾರೆ ಎಂಬ ಡಿ. ಕೆ. ಶಿವಕುಮಾರ್​ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಟಾಂಗ್​ ನೀಡಿದ್ದಾರೆ. ನಾವೀಗ ಸಕ್ರಿಯ ರಾಜಕಾರಣಿಗಳು, ನಾವೇಕೆ ತೊರೆಯಬೇಕು ಎಂದು ಪ್ರಶ್ನಿಸಿದ್ದಾರೆ.

sudhakar
ಡಾ. ಕೆ. ಸುಧಾಕರ್​ ಹೇಳಿಕೆ
author img

By

Published : Jan 19, 2021, 4:35 PM IST

ಹುಬ್ಬಳ್ಳಿ: ನಾವೀಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು? ನಿಷ್ಕ್ರಿಯಯವಾಗಿರುವ ರಾಜಕಾರಣಿಗಳು ಮಾತ್ರ ಕಾಂಗ್ರೆಸ್ ಸೇರ್ಪಡೆ ಆಗಬಹುದು. ಆದ್ರೇ, ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ವಾಪಸ್ ಹೋಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​ ಹೇಳಿದ್ದಾರೆ.

ಡಿಕೆಶಿ ಹೇಳಿಕೆಗೆ ಸಚಿವ ಸುಧಾಕರ್​ ಪ್ರತಿಕ್ರಿಯೆ

ನಗರದಲ್ಲಿಂದು ಕಿಮ್ಸ್ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಕೋ ವ್ಯಾಕ್ಸಿನ್ ಸಾಕಷ್ಟು ಕ್ಲಿನಿಕಲ್ ಟ್ರಯಲ್​ ಆದ ಬಳಿಕವೇ ವ್ಯಾಕ್ಸಿನೇಷನ್​ಗೆ ಅವಕಾಶ ನೀಡಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು‌-ಜನರ ಮೇಲೆ ಕ್ಲಿನಿಕಲ್ ಟ್ರಯಲ್​ ನಡೆಸಿರುವ ಮಾಹಿತಿ ಇದೆ ಎಂದರು.

ಮಾಹಿತಿ ಪ್ರಕಾರ, ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ ಆಗಿದೆ. ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತವಾದ ಲಸಿಕೆ, ಯಾವುದೇ ಆತಂಕ‌ ಬೇಡ. ಕೋವಿಶಿಲ್ಡ್ ಅಥವಾ ಕೊವ್ಯಾಕ್ಸಿನ್ ಯಾವುದನ್ನು ಬೇಕಾದ್ರು ತೆಗೆದುಕೊಳ್ಳಬಹುದು. ಇಂತಹುದೇ ತೆಗೆದುಕೊಳ್ಳಬೇಕು ಎಂಬ ಯಾವುದೇ ಒತ್ತಡ ಇಲ್ಲ. ಕೋವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಯಾರಿಗೂ ಬಲವಂತ ಮಾಡುತ್ತಿಲ್ಲ. ವ್ಯಾಕ್ಸಿನ್ ಬೇಡ ಅನ್ನುವವರು ತೆಗೆದುಕೊಳ್ಳಬೇಡಿ ಎಂದು ಸಚಿವರು ಹೇಳಿದ್ರು.

ಓದಿ: ಕೋವಿಡ್​ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ಆತಂಕ ಸಹಜ, ರಾಜ್ಯದಲ್ಲಿ ಪ್ರಯೋಗ ಯಶಸ್ವಿ: ಡಾ. ಕೆ ಸುಧಾಕರ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.