ಹುಬ್ಬಳ್ಳಿ : ಸಾರ್ವಜನಿಕರು ಸೇವೆಗಳನ್ನು ಪಡೆಯಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಗೆ ಬರುತ್ತಿರುವುದರಿಂದ ಸಾರ್ವಜನಿಕರ ಹಾಗೂ ಕಚೇರಿ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಕಚೇರಿ ನಿರ್ವಹಣೆಗೆ ವಾಟ್ಸ್ಆ್ಯಪ್ ನಂಬರ್ ಕೊಡಲಾಗಿದೆ.
ಅವಳಿ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ವಾಟ್ಸ್ಆ್ಯಪ್ ನಂ. 9449491444 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 0836 2251055, 2258955 ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತ ಅರ್ಜಿಯನ್ನು ಕಳುಹಿಸಿದ್ರೆ ಕಚೇರಿ ಸಿಬ್ಬಂದಿ ಅದರ ಬಗ್ಗೆ ನಿಗಾವಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಾರೆ.
ಇಮೇಲ್ ಮೂಲಕವೂ ಸಹ ಸಮಸ್ಯೆಗಳನ್ನು ಕಚೇರಿಗೆ ಕಳಿಸಬಹುದು. ಸಚಿವರ ಇಮೇಲ್ ಐಡಿ: Pralhadvjoshi@gmail.com