ETV Bharat / state

ಸದನ ಸಮಿತಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ: ಸಚಿವ ಜೋಶಿ - ಈದ್ಗಾ ಮೈದಾನ ಸುದ್ದಿ

ಸದನ ಸಮಿತಿ ವರದಿ ಬಂದ ಬಳಿಕ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ ನೀಡಿದ್ದಾರೆ.

Union Minister Prahlad Joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By

Published : Aug 29, 2022, 5:37 PM IST

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ಸದನ ಸಮಿತಿ ವರದಿ ಕೊಡುತ್ತದೆ. ವರದಿ ನೀಡಿದ ಬಳಿಕ, ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಈದ್ಗಾ ಮೈದಾನ ವಿಚಾರವಾಗಿ ಮೇಯರ್ ಹಾಗೂ ಜನಪ್ರತಿನಿಧಿಗಳ ಜೊತೆ ಸಚಿವರು ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಬಹಳಷ್ಟು ಜನ ಆರ್ಜಿ ಕೊಟ್ಟಿದ್ದಾರೆ. ಕೆಲವರು ವಿರೋಧ ಕೂಡ ಮಾಡಿದ್ದಾರೆ. ಒಟ್ಟಾರೆ ಜನರ ಭಾವನೆಗಳನ್ನು, ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಳೆದ ಮೂರು ವರ್ಷ ಹಬ್ಬ ಆಚರಣೆ ಮಾಡಿಲ್ಲ. ಈ ಮೊದಲು ಆಚರಣೆಗೆ ಯಾವುದೇ ಆರ್ಜಿಗಳು ಬಂದಿಲ್ಲ. ಹೀಗಂತ ಪಾಲಿಕೆ ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಸಮಯ ಕೇಳಿದ್ದಾರೆ. ಅವರೂ ಮಾಹಿತಿ ನೀಡಲಿ. ಎಲ್ಲರೂ ವರದಿ ನೀಡಿದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ನಮಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಿ: ಕ್ರೈಸ್ತ ಸಮುದಾಯದ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.