ETV Bharat / state

ಕಾಂಗ್ರೆಸ್​ ನಾಯಕರು ಪಜಾಪ್ರಭುತ್ವದಲ್ಲಿದ್ದೇವೆ ಎಂಬುದನ್ನು ಅರಿತು ಮುನ್ನಡೆಯಬೇಕು: ಪ್ರಹ್ಲಾದ್​ ಜೋಶಿ - ಕೊರೊನಾ ವೈರಸ್​ ಅಪ್​ಡೇಟ್​

ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹಾರೈಸಿದರು. ಬಳಿಕ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

Union Coal Minister Prahlad Joshi
ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಶಿ
author img

By

Published : Jul 2, 2020, 5:54 PM IST

ಹುಬ್ಬಳ್ಳಿ: ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಜೊತೆಗೆ ಮರಣ ಪ್ರಮಾಣ ಕೂಡಾ ಕಡಿಮೆ ಇದೆ. ಜನ ಮತ್ತಷ್ಟು ಜಾಗೃತರಾಗಬೇಕು. ನಾಲ್ಕೂವರೆ ತಿಂಗಳಿಂದ ದೆಹಲಿಯಲ್ಲಿದ್ದೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಂತೆ ನಾವೆಲ್ಲಾ ನಡೆದುಕೊಂಡಿದ್ದೇವೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ ಮತ್ತೆ ಲಾಕ್​​​​ಡೌನ್ ಮಾಡುವ ಅವಶ್ಯಕತೆ ಇಲ್ಲ. ಅದರ ಬದಲಾಗಿ ಆರೋಗ್ಯ ವ್ಯವಸ್ಥೆಯನ್ನೇ ಮೇಲ್ದರ್ಜೆಗೇರಿಸಿದ್ದೇವೆ ಎಂದರು.

ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚೀನಾಕ್ಕೆ ತಕ್ಕ ಉತ್ತರ ನೀಡಲು ರಕ್ಷಣಾ ಪಡೆ ಸನ್ನದ್ಧವಾಗಿದೆ. ಅದಕ್ಕೆ ತಕ್ಕನಾದ ನಾಯಕತ್ವ ನಾವು ಹೊಂದಿದ್ದೇವೆ. ಕಳೆದ ಭಾರಿಯೂ ಡೋಕ್ಲಾಮ್​​ನಲ್ಲಿಯೂ ಒಂದಿಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ. ಈಗಲೂ ಅಷ್ಟೇ ಎಂದರು.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಶಿ

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಪ್ರಮಾಣ ವಚನ ಸ್ವೀಕರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ. ಆದರೆ ಕಾಂಗ್ರೆಸ್​​ ಪಕ್ಷದ ನಾಯಕರು ಪ್ರಜಾಪ್ರಭುತ್ವದಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಡಿಕೆಶಿ ಏನು ಮಾಡುತ್ತಾರೆ ಎಂಬುದಕ್ಕಿಂತ ಪಕ್ಷದ ಸ್ಥಿತಿಗತಿ ಏನಾಗಿದೆ ತಿಳಿದುಕೊಳ್ಳಲಿ ಎಂದು ಟೀಕಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.