ಹುಬ್ಬಳ್ಳಿ: ಕಮರಿಪೇಟೆಯಲ್ಲಿ ಪ್ರತಿವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ವಿಜಯ ದಶಮಿ ಸಂದರ್ಭದಲ್ಲಿ ನಡೆಸುವ ಟಗರು ಕಾಳಗ ನೋಡುಗರನ್ನು ಮೈನವಿರೇಳಿಸುವಂತೆ ಮಾಡಿತು.
ಪ್ರತಿವರ್ಷ ದಸರಾ ಮತ್ತು ಟಗರು ಕಾಳಗವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಆತಂಕದಿಂದ ಸಂಕ್ಷಿಪ್ತವಾಗಿ ಆಚರಣೆ ಮಾಡಲಾಗಿದೆ. ಈ ಟಗರಿನ ಕಾಳಗ ಸ್ನೇಹ, ಪ್ರೀತಿ ಸಹಬಾಳ್ವೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು.
ಸುಮಾರು ವರ್ಷಗಳಿಂದ ಟಗರಿನ ಕಾಳಗದ ಮೂಲಕ ವಿಜಯ ದಶಮಿ ಆಚರಣೆ ಮಾಡಲಾಗುತ್ತಿದ್ದು, ಈ ಕಾಳಗಕ್ಕೆ ಐತಿಹಾಸಿಕ ಪರಂಪರೆ ಇದೆ ಎನ್ನಲಾಗ್ತಿದೆ.