ETV Bharat / state

ಇನ್ನೆರಡು ಮೂರು ದಿನಗಳಲ್ಲಿ ರಾಜ್ಯದ ಚುನಾವಣೆ ಚಿತ್ರಣ ಬದಲಾಗಲಿದೆ: ಬಿಎಸ್​ವೈ ಭವಿಷ್ಯ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಾವು ಗೆದ್ದು ಬರುತ್ತೇವೆ. ನಮ್ಮದೇ ಆದ ತಂತ್ರಗಾರಿಕೆ ರೂಪಿಸಿದ್ದೇವೆ. ಖಂಡಿತಾ ಬಿಜೆಪಿ ಗೆದ್ದೇ ಗೆಲ್ಲುತ್ತದೆ :ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ

Former CM Yeddyurappa spoke at a press conference.
ಮಾಜಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Apr 27, 2023, 1:52 PM IST

ಇನ್ನೆರಡು ಮೂರು ದಿನಗಳಲ್ಲಿ ರಾಜ್ಯದ ಚುನಾವಣೆ ಚಿತ್ರಣ ಬದಲಾಗಲಿದೆ: ಬಿಎಸ್​ವೈ ಭವಿಷ್ಯ

ಹುಬ್ಬಳ್ಳಿ: ಜನರು ಸಾಕಷ್ಟು ಅಪೇಕ್ಷೆಗಳನ್ನಿಟ್ಟಿದ್ದಾರೆ. ಅವರ ಅಪೇಕ್ಷೆವನ್ನು ನಾವು ನೆರವೇರಿಸುತ್ತೇವೆ. ಇನ್ನೂ ಎರಡ್ಮೂರು ದಿನಗಳಲ್ಲಿ ರಾಜ್ಯದ ಚುನಾವಣಾ ಚಿತ್ರಣ ಬದಲಾಗಲಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. ಪ್ರಧಾನಿ ನರೇಂದ್ರ ‌ಮೋದಿಯವರ ಸಂವಾದ ಬಳಿಕ‌ ಮಾತನಾಡಿದ ಅವರು, ಮೋದಿಯವರು ರಾಜ್ಯದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೊ‌ ಅಷ್ಟೇ ಸತ್ಯ. ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ.

ಕಾಂಗ್ರೆಸ್ ನಾಯಕರು ಜನರಿಗೆ ಸುಳ್ಳು ಭರವಸೆ ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ಧರಾಮಯ್ಯ ಸುಳ್ಳು ಭರವಸೆ ಕೊಡುವುದನ್ನು ಬಿಟ್ಟುಬಿಡಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸಾಧ್ಯವಿಲ್ಲ ಎಂದು ಆರೋಪಿಸಿದರು.

ಕಾರ್ಯಕರ್ತರು ಉತ್ಸಾಹದಿಂದ ಕೆಲಸ : ಈ ಬಾರಿ ನಿಶ್ಚಿತವಾಗಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಪ್ರತಿ ಬೂತ್ ನಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ‌ ಮಾಡಲಾಗುತ್ತಿದೆ. ಕಾರ್ಯಕರ್ತರು ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿದಲ್ಲಿ 150 ಕ್ಷೇತ್ರದಲ್ಲಿ ಗೆಲುವು ನಿಶ್ಚಿತ. ಜನರ ಆಶೀರ್ವಾದ ಬಿಜೆಪಿ ಮೇಲಿದೆ. ಮೋದಿಯವರ ಈ ಸಂವಾದದಿಂದ ಕಾರ್ಯಕರ್ತರಲ್ಲಿ ಬೂಸ್ಟರ್ ಡೋಸ್ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂಓದಿ: ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆಯೊಡ್ಡಿ ನಾಮಪತ್ರ ವಾಪಸ್ : ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಗೇಲ್ತೇವಿ:ಯಡಿಯೂರಪ್ಪ ಅಸಹಾಯಕತೆಯಿಂದ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಾವು ಗೆದ್ದು ಬರುತ್ತೇವೆ. ನಮ್ಮದೇ ಆದ ತಂತ್ರಗಾರಿಕೆ ರೂಪಿಸಿದ್ದೇವೆ. ಖಂಡಿತಾ ಗೆದ್ದೇ ಗೆಲ್ತೇವಿ ಎಂದು ಹೇಳಿದರು.

ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುತ್ತಾರೆ ಅನ್ನೋ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಲಿಂಗಾಯತ ನಾಯಕರ ವಿರುದ್ದ ಲಿಂಗಾಯತ ನಾಯಕರನ್ನು ಬಿಟ್ಟಿದ್ದಾರೆ ಅನ್ನೋ ಪ್ರಶ್ನೆಗೂ ಯಡಿಯೂರಪ್ಪ ಸೈಲೆಂಟ್ ಆಗಿ ಯಾವುದೇ ಉತ್ತರ ನೀಡದೇ ಹೊರಟು ಹೋದರು‌.

ಡಬಲ್ ಎಂಜಿನ್ ಸರ್ಕಾರ ಪ್ರಧಾನಿ ಮೋದಿ ಅಪೇಕ್ಷೆ ಆಗಿದೆ :ಪ್ರಧಾನಿ ನರೇಂದ್ರ ಮೋದಿ ಅಪೇಕ್ಷೆ ಏನಿದೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಬೇಕಂತೆ. ಅಪೇಕ್ಷೆಯನ್ನು ನೂರಕ್ಕೆ ನೂರು ನಾವು ಪೂರೈಸುತ್ತೇವೆ. ಈ ಭರವಸೆಯನ್ನು ನರೇಂದ್ರ ಮೋದಿಗೆ ಕೊಡುತ್ತೇನೆ.

ಪ್ರಧಾನಿ ನರೇಂದ್ರ ಮೋದಿಜೀ, ಅಮಿತ್​ ಶಾ, ನಡ್ಡಾ ಜಿ ಎಲ್ಲರೂ ಸಹ ರಾಜ್ಯದಲ್ಲಿ ಪ್ರವಾಸ ಮಾಡಿದ ಮೇಲೆ ರಾಜಕೀಯ ಚಿತ್ರಣ ಬದಲಾಗಲಿದೆ. ಪ್ರವಾಸ ಮಾಡಿದ ಮೇಲೆ ಅಗಾಧ ಜನರ ಬೆಂಬಲ ನೋಡಿ ಬಹುಮತದ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ಮೂಡಿದೆ ಎಂದರು.

ಇದನ್ನೂಓದಿ:ಯುವಕರ ಏಳಿಗೆ, ದೇಶದ ಅಭಿವೃದ್ಧಿಯೇ ಡಬಲ್​ ಎಂಜಿನ ಸರ್ಕಾರದ ಪ್ರಮುಖ ಉದ್ದೇಶ.. ಮೋದಿ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.