ETV Bharat / state

ನೀವು ನನಗೆ ವೋಟ್​​ ಹಾಕಿಲ್ಲ: ಊರು ಬಿಟ್ಟು ಹೋಗಿ ಅಂತಿದ್ದಾನಂತೆ ಗ್ರಾಪಂ ಸದಸ್ಯ!

ಕೊರೊನಾ ಸಮಯದಲ್ಲಿ ಎಲ್ಲರೂ ಮನೆಯಲ್ಲಿರಿ ಅಂತ ಸರ್ಕಾರ ಮತ್ತು ಜಿಲ್ಲಾಡಳಿತ ನಿತ್ಯ ಹೇಳುತ್ತಿದೆ. ಆದರೆ ಇಲ್ಲೊಬ್ಬ ಗ್ರಾಪಂ ಸದಸ್ಯ ಮಾತ್ರ ಜಾಗ ಬಿಟ್ಟು ಹೋಗಿ.ಮನೆಯನ್ನ ಖಾಲಿ ಮಾಡಿ ಅಂತ ಹೇಳ್ತಿದ್ದಾನಂತೆ.

Trouble by Gram Panchayat member in hubli
ಉರು ಬಿಟ್ಟು ಹೋಗಿ ಅಂತಿದ್ದಾನಂತೆ ಗ್ರಾಪಂ ಸದಸ್ಯ
author img

By

Published : Jun 2, 2021, 5:19 PM IST

ಹುಬ್ಬಳ್ಳಿ: ಗ್ರಾಪಂ ಸದಸ್ಯನೊಬ್ಬ ನನಗೆ ನೀವು ಮತ ಹಾಕಿಲ್ಲ. ಗ್ರಾಮದಿಂದ ಹೊರ ಹೋಗಿ ಎಂದು ಗ್ರಾಮಸ್ಥರಿಗೆ ಪೀಡಿಸುತ್ತಿದ್ದಾನೆ ಎಂಬ ಆರೋಪ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ.

ಉರು ಬಿಟ್ಟು ಹೋಗಿ ಅಂತಿದ್ದಾನಂತೆ ಗ್ರಾಪಂ ಸದಸ್ಯ

ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರದಲ್ಲಿ ಈ ಘಟನೆ ನಡೆದಿದೆ. ಅಂಚಟಗೇರಿ ಗ್ರಾಪಂ ಸದಸ್ಯ ಸಹದೇವಪ್ಪ ಮಾಳಗಿ ಎಂಬಾತ ಇಲ್ಲಿನ ಸ್ಥಳೀಯ ಜನರನ್ನ ನಿತ್ಯವೂ ಜಾಗ ಬಿಟ್ಟು ಹೋಗಿ ಅಂತ ಬೆದರಿಸುತ್ತಿದ್ದಾನಂತೆ. ಸರ್ಕಾರಿ ಜಾಗದಲ್ಲಿ ಇಲ್ಲಿನ ಜನ ವಾಸಿಸುತ್ತಿದ್ದಾರೆ. ದಿವಂಗತ ಶಿವಳ್ಳಿ ಸಚಿವರಾದ ವೇಳೆ ಇಲ್ಲಿನ ಜನರ ಅಭಿವೃದ್ಧಿಗೆ ರಸ್ತೆ ಸೇರಿದಂತೆ ನೀರಿನ ಸೌಲಭ್ಯ ಸಹ ನೀಡಿದ್ರು. ಅಲ್ಲದೇ ಈ ಜಾಗದ ಹಕ್ಕುಪತ್ರ ನೀಡುವ ಭರವಸೆಯನ್ನು ಸಹ ನೀಡಿದ್ರು. ಆದರೆ, ಅವರು ನಿಧನರಾದ ಬಳಿಕ ಎಲ್ಲವೂ ಬದಲಾಗಿದೆ.

ಗ್ರಾಪಂ ಸದಸ್ಯ ಸಹದೇವಪ್ಪ ಜಾಳಗಿ, ಮಲ್ಲವ್ವಾ ಜಂಬಾಳ ಎಂಬುವವರು ಗ್ರಾಪಂ ಚುನಾವಣೆ ವೇಳೆ, ನಮಗೆ ನೀವು ಮತ ಹಾಕಿಲ್ಲ ಎಂದು ಕ್ಯಾತೆ ತೆಗೆದು ಸದ್ಯ ಜನರನ್ನ ಜಾಗ ಬಿಡಿ ಎಂದು ನಿತ್ಯ ಕಾಟ ಕೊಡುತ್ತಿದ್ದಾರಂತೆ. ಕೊರೊನಾ ಸಮಯದಲ್ಲಿ ನಾವೆಲ್ಲಿ ಹೋಗಬೇಕು. ನಮಗೆ ಇಲ್ಲಿರಲು ಎಲ್ಲರೂ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಗ್ರಾಪಂ ಸದಸ್ಯ ಮಾತ್ರ ಈ ರೀತಿಯಾಗಿ ತೊಂದರೆ ಕೊಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.

ಬ್ಲ್ಯಾಕ್​ ಫಂಗಸ್​ಗೆ​ ಮಂಡ್ಯದಲ್ಲಿ ಮೊದಲ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.