ಧಾರವಾಡ: ದೇಶದ ಭವಿಷ್ಯವನ್ನು ಬದಲಾಯಿಸುವ ಚುನಾವಣೆ ಇದಾಗಿದೆ. ಬಿಜೆಪಿ ಆಡಳಿತ ಅಂದ್ರೆ ಕಮಿಷನ್ ಸರ್ಕಾರ. 40% ಕಮಿಷನ್ ಕೊಟ್ಟರೆ ಎಲ್ಲ ಕೆಲಸ ಆಗುತ್ತವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿದ್ಯಾಕ್ಷೇತ್ರ ಸೇರಿ ಎಲ್ಲ ಕ್ಷೇತ್ರದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ. ಕಂಟ್ರಾಕ್ಟರ್ ಬಿಲ್ ಕ್ಲಿಯರ್ ಆಗಿಲ್ಲ. ವಿರೋಧ ಪಕ್ಷದಲ್ಲಿದ್ದೇನೆ ಅಂತ ನಾನು ಹೇಳುತ್ತಿಲ್ಲ. ಕಾಂಟ್ರ್ಯಾಕ್ಟರ್ ಅಸ್ಸೋಸಿಯೇಷನ್ನವರು ಇಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವರಿಗೆ ಬರವಣಿಗೆ ಮೂಲಕ ತಿಳಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಮೋದಿ ಫ್ರೂಫ್ ಕೇಳ್ತಾರೆ. ಅಮಿತ್ ಶಾ ಅವರು ‘ನಾ ಕಾಹೂಂಗಾ ನಾ ಕಾನೆದುಂಗಾ’ ಅಂತಾರೆ. ತಿನ್ನೋರು ಪಕ್ಕದಲ್ಲೇ ಇದ್ದಾರೆ. ಅವರ ಬಗ್ಗೆ ಯಾಕೆ ಆಕ್ಷನ್ ಆಗುತ್ತಿಲ್ಲ. ಬಂದಾಗೆಲ್ಲ ಬಿಜೆಪಿ ಉತ್ತಮ ಕೆಲಸ ಮಾಡಿದೆ ಅಂತಾರೆ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾರೆ. ನಾವು ಏನು ಮಾಡದಿದ್ದರೆ ನೀವು ಪ್ರಧಾನಿ ಆಗುತ್ತಿರಲಿಲ್ಲ ಎಂದು ಹೇಳಿದರು.
ಸಮಾನ ಹಕ್ಕನ್ನು ಎಲ್ಲರಿಗೂ ನೀಡಿದ್ದೇವೆ. ಚಾಯ್ ಮಾರೋರು ಪ್ರಧಾನಿ ಆದ್ರೂ, ನಾನು ಕೂಲಿ ಕಾರ್ಮಿಕನ ಮಗ ಅಧ್ಯಕ್ಷ ಆದೇ, 36 ಜನರು ಅವರ ಪಾರ್ಟಿಯಲ್ಲಿ ಪಾರಂಪರಿಕವಾಗಿ ಬಂದಿದ್ದಾರೆ. ಆದ್ರೆ ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಬಳಿಕ ಯಾರು ಮಂತ್ರಿ ಆಗಿಲ್ಲ. ಸಂವಿಧಾನಿಕ ಹುದ್ದೆಯನ್ನು ಯಾರು ಪಡೆದಿಲ್ಲ. ಗಾಂಧಿ ಪರಿವಾರದಿಂದ ದೂರ ಇರಿ ಅಂತ ಹೇಳ್ತೀರಿ ಯಾಕೆ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿಗೆ ಪ್ರಧಾನಿ ಅವಕಾಶ ಇದ್ದರೂ ಸಹ ಮನೋಹನಸಿಂಗ್ಗೆ ನೀಡಿದ್ರು. ಭಾರತ್ ಜೋಡೋ ಯಾತ್ರೆ ಮಾಡಿ ಜಮ್ಮು ಕಾಶ್ಮೀರದವರೆಗೂ ರಾಹುಲ್ ಗಾಂಧಿ ನಡೆದರು. ಪ್ರತಿಯೊಂದು ಬೆಲೆ ಏರಿಕೆಯಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಇಂದಿರಾಗಾಂಧಿ ಎದೆಗೆ 32 ಗುಂಡುಗಳು ಹಾರಿಸಿದ್ರು, ರಾಜೀವ್ ಗಾಂಧಿ ಏಕತೆಗಾಗಿ ಹೋರಾಟ ಮಾಡಿದ್ರು. ಅವರನ್ನು ಮಾನವ ಬಾಂಬ್ ಮೂಲಕ ಕೊಲೆ ಮಾಡಿದರು. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಆದ್ರೆ ಬಿಜೆಪಿ ಪಕ್ಷದ ಕೊಡುಗೆ ಏನು. ಹೋದಲ್ಲಿ ಬಂದಲ್ಲಿ ಬಾಯಿಯೋ ಔರ್ ಬೆಹನೋ ಅಂತ ಹೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ವೇಳೆ ಬರೋದು ಜನರನ್ನು ಹುರಿದುಂಬಿಸಿ ಹೋಗ್ತಾರೆ. 70 ವರ್ಷದಲ್ಲಿ ನಾವು ಮಾಡಿದ ಕಾರ್ಯದ ಬಗ್ಗೆ ಲೆಕ್ಕ ಕೊಟ್ಟಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಲವಾರು ಶೈಕ್ಷಣಿಕ ಬೆಳವಣಿಗೆ ಮಾಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಎಲ್ಲೂ ಇರಲಿಲ್ಲ. ಇವರೆಲ್ಲ ಸರ್ಕಾರಿ ನೌಕರಿ ಮಾಡೋದರಲ್ಲಿ ಇದ್ದರು ಎಂದು ಆರೋಪಿಸಿದರು.
ಡಬಲ್ ಎಂಜಿನ್ ಸರ್ಕಾರ ಅಲ್ಲ ಟ್ರಬಲ್ ಎಂಜಿನ್ ಸರ್ಕಾರ. ಎಲ್ಲ ಕಡೆ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮೋದಿ ಸುಳ್ಳಿನ ಮೇಲೆ ಸುಳ್ಳು ಹೇಳಿದ್ರು. 410 ರೂಪಾಯಿಗೆ ಇದ್ದ ಸಿಲಿಂಡರ್ ಬೆಲೆ 1150 ರೂಪಾಯಿಗೆ ಆಗಿದೆ. ತಮಗೆ ಬೇಕಾದವರಿಗೆ ಎಲ್ಐಸಿ ಯಿಂದ ಸಾಲ ಕೊಡಿಸೋದು, ಏರ್ ರ್ಪೋರ್ಟ್, ರಸ್ತೆ, ರೈಲ್ವೆಗಳನ್ನು ಖರೀದಿ ಮಾಡೋ ಕೆಲ್ಸ ಮಾಡಿಸಿದ್ರು. ಎಲ್ಲದರ ಮೇಲೆ ಜಿಎಸ್ಟಿ ಹಾಕಿ ಬೆಲೆ ಏರಿಕೆ ಮಾಡಿದ್ರು. ಜನರಿಗೆ ಮೋಸ ಮಾಡುವ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಮನವಿ ಮಾಡಿದರು.
ಅಮಿತ್ ಶಾ ಹೇಳ್ತಾರೆ. ಅಧಿಕಾರಕ್ಕೆ ಬಂದ್ರೆ ದಂಗೆ ಆಗುತ್ತೆ ಅಂತ ಅವರೇ ಹೇಳುವ ಹಾಗೆ ಶಾಂತಿ ಇರಬಾರದು. ಸಮಾಜ ಹೊಡೆಯುವ ಕೆಲಸ ಇವರದು. ಈ ರೀತಿಯಾಗಿ ಭಾಷಣ ಮಾಡಿದ್ದಾರೆ ಅಂತ ಎಲೆಕ್ಷನ್ ಕಮಿಷನ್ಗೆ ದೂರು ನೀಡಲಿದ್ದಾರೆ. ಮುಂದೆ ಕೋರ್ಟ್ಗೆ ಹೋಗೋದರ ಬಗ್ಗೆ ನೋಡೋಣ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಹಲವಾರು ವರ್ಷದಿಂದ ಬಿಜೆಪಿ ಸಂಘಟನೆ ಮಾಡಿದ್ದೆ ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿದ್ದೆ. 6 ಬಾರಿ ಸತತವಾಗಿ ಆಯ್ಕೆಯಾಗಿ ಪ್ರೀತಿ ವಿಶ್ವಾಸ ಗಳಿಸಿದ್ದೆ. ಬಿಜೆಪಿ 7ನೇ ಬಾರಿ ನನಗೆ ಸ್ಪರ್ಧೆ ಮಾಡೋಕೆ ಅವಕಾಶ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದ್ರೆ ಗೌರವಯುತವಾಗಿ ನನಗೆ ಪಕ್ಷ ಬಿಡು ಅಂದಿದ್ರೆ ಬಿಡುತ್ತಿದ್ದೆ. ಆದ್ರೆ ಅಗೌರವದಿಂದ ನನ್ನನ್ನು ನಡೆಸಿಕೊಂಡರು. ಪಕ್ಷ ಕಟ್ಟಿ ಬೆಳೆಸಿದವರೇ ಪಕ್ಷ ಬಿಡುವಂತೆ ಆಯಿತು. ಕೆಲವೇ ಕೆಲವು ಜನರ ಹಿಡಿತದಲ್ಲಿ ಬಿಜೆಪಿ ಇದೆ. ಕಾಂಗ್ರೆಸ್ನಲ್ಲಿ ಪಕ್ಷಕ್ಕೆ ನಾನು ಸೇರ್ಪಡೆಯಾದಾಗ ಯಾವುದೇ ರೀತಿ ಬೇಡಿಕೆ ಇಟ್ಟಿರಲಿಲ್ಲ. ಕೇವಲ ಗೌರವದಿಂದ ನನ್ನನ್ನು ಕಾಣಿ ಅಂತ ಹೇಳಿದ್ದೆ. ಅದೇ ರೀತಿ ಈಗ ನನ್ನನ್ನು ಕಾಂಗ್ರೆಸ್ ನೋಡಿಕೊಳ್ಳುತ್ತಿದೆ ಎಂದರು.
ಇದನ್ನೂಓದಿ: ಬಿಜೆಪಿಯಲ್ಲಿ ಮಾತ್ರ ಲಿಂಗಾಯತರು ಮಂದೆಯೂ ಮುಖ್ಯಮಂತ್ರಿಯಾಗುತ್ತಾರೆ: ನಳಿನ್ ಕುಮಾರ್ ಕಟೀಲ್