ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಲಕ್ಷಣ ರಹಿತರು ಅಥವಾ ಸಾಧಾರಣ ಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರ ಮನೆಯಲ್ಲಿ ಪ್ರತ್ಯೇಕವಾಗಿರುವರು (ಹೋಂ ಐಸೋಲೇಷನ್) ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಲಹೆಗಳನ್ನು ನೀಡಿದೆ.
ಮನೆಯಲ್ಲಿ ಬೆಳಕು, ಗಾಳಿ ಬರುವ ಕೊಠಡಿಯಲ್ಲಿ ಪ್ರತ್ಯೇಕವಾಗಿರುವ ಶೌಚಾಲಯ ಹೊಂದಿರಬೇಕು. ಮನೆಯಲ್ಲಿ ಡಿಜಿಟಲ್ ಥರ್ಮೋಮೀಟರ್, ಪಲ್ಸ್ ಆ್ಯಕ್ಸಿಮೀಟರ್, ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಹೊಂದಿರಬೇಕು. ಮನೆಯಲ್ಲಿರುವ ಒಬ್ಬ ಸದಸ್ಯ, ಕೋವಿಡ್ ಪಾಸಿಟಿವ್ ಕಂಡು ಬಂದ ವ್ಯಕ್ತಿಯನ್ನು ಆರೈಕೆ ದಿನದ 24 ಗಂಟೆಗಳ ಸೇವೆ ಮಾಡಲು ನೇಮಿಸಿರಬೇಕು. ಮತ್ತು ಆ ವ್ಯಕ್ತಿ ಕಡ್ಡಾಯವಾಗಿ ಕ್ವಾರಂಟೈನ್ ವಾಚ್ ಆ್ಯಪ್ ಹೊಂದಿರಬೇಕು, ಪ್ರತ್ಯೇಕವಾಗಿರುವ ವ್ಯಕ್ತಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮುಖ್ಯವಾಗಿ ವೈದ್ಯಕೀಯ ಮಾಸ್ಕ್ ( ಎನ್ 95 ಮಾಸ್ಕ್ )ನ್ನು ಯಾವಾಗಲೂ ಧರಿಸಿರಬೇಕು. ಹಾಗೂ ಕಡ್ಡಾಯವಾಗಿ ಪ್ರತಿ 8 ಗಂಟೆಗೆ ಒಮ್ಮೆ ಬದಲಾಯಿಸಬೇಕು.
ಪ್ರತ್ಯೇಕವಾಗಿರುವ ವ್ಯಕ್ತಿ ಮನೆಯಲ್ಲಿ ಗುರುತಿಸಿ, ನಿಗದಿ ಪಡಿಸಿದ ಕೊಠಡಿಯಲ್ಲಿಯೇ ಇರಬೇಕು. ಹಾಗೂ ಇತರರೊಂದಿಗೆ 2 ಮೀಟರ್ ಅಂದರೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೊಠಡಿಯಿಂದ ಹೊರಗಡೆ ಹೋಗಬಾರದು. ವ್ಯಕ್ತಿಯು ಅಗತ್ಯ ವಿಶ್ರಾಂತಿ ಪಡೆಯುವುದು ಹಾಗೂ ಹೆಚ್ಚು ದ್ರವ ಆಹಾರವನ್ನು ಸೇವಿಸುವುದು, ಹೆಚ್ಚು ನೀರು ಕುಡಿಯಬೇಕು. ಕೆಮ್ಮುವಾಗ, ಸೀನುವಾಗ ಕರ ವಸ್ತ್ರವನ್ನು ಉಪಯೋಗಿಸುವುದು, ಟಿಶ್ಯು ಪೇಪರ್ ಉಪಯೋಗಿಸಿ, ಕೆಮ್ಮು ಬಂದಾಗ ಕೈಯನ್ನು ಅಡ್ಡ ಇಟ್ಟುಕೊಂಡು ನಂತರ ಸ್ವಚ್ಛಗೊಳಿಸಿ, ಆಗಾಗ ಸಾಬೂನಿನಿಂದ 40 ಸೆಕೆಂಡ್ ಕೈ ತೊಳೆದುಕೊಳ್ಳಬೇಕು.
ವೈಯಕ್ತಿಕವಾಗಿ ಬಳಸುವಂತಹ ಪಾತ್ರೆಗಳು, ತಟ್ಟೆಗಳು, ಬಟ್ಟೆ, ಟವೆಲ್ ಹಾಗೂ ಇತ್ಯಾದಿಗಳನ್ನು ಕುಟುಂಬದ ಇತರೆ ಸದಸ್ಯರುಗಳು ಹಂಚಿಕೊಳ್ಳದೆ ದೂರ ಇಡಬೇಕು. ಮತ್ತು ಕೊಠಡಿಯಲ್ಲಿ ಪದೇಪದೆ ವಸ್ತುಗಳನ್ನು ಮುಟ್ಟಬಾರದು. ಆಗಾಗ ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಬೇಕು. ಸ್ನಾನ ಗೃಹ ಹಾಗೂ ಶೌಚಾಲಯಗಳನ್ನು ದಿನಕ್ಕೆ ಒಂದು ಬಾರಿಯಾದರೂ ಸ್ವಚ್ಛಗೊಳಿಸುವುದು ಹಾಗೂ ಸ್ಯಾನಿಟೈಸರ್ನಿಂದ ಸ್ವಚ್ಛ ಮಾಡಬೇಕು. ವೈದ್ಯರ ಸಲಹೆಗಳ ಹಾಗೂ ಔಷಧೋಪಚಾರವನ್ನು ಕಡ್ಡಾಯವಾಗಿ ಪಾಲಿಸಿ, ವೈದ್ಯರು ತಿಳಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು.
ಪಲ್ಸ್ ಆ್ಯಕ್ಸಿ ಮೀಟರ್, ಡಿಜಿಟಲ್ ಥರ್ಮಾ ಮೀಟರ್ ಸಹಾಯದಿಂದ ಆಗಾಗ ನಿಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು. ಆರೋಗ್ಯ ಸ್ಥಿತಿಯಲ್ಲಿ ಏನಾದರೂ ಗಂಭೀರ ಲಕ್ಷಣ ಕಂಡು ಬಂದರೆ ಜ್ವರ, ಗಂಟಲು ಕೆರೆತ, ನೆಗಡಿ ಸಮಸ್ಯೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು.
ಆರೋಗ್ಯಕರ ಪೌಷ್ಟಿಕ ಆಹಾರ ಸೇವನೆ ಸೇವನೆ ಮಾಡುವುದು, ಮತ್ತು ಧೂಮಪಾನ, ತಂಬಾಕು ಸೇವನೆ ಕಡ್ಡಾಯವಾಗಿ ನಿರ್ಬಂಧಿಸಬೇಕು. ಯಾವುದೇ ಕಾರಣಕ್ಕೂ ಈ ಚಟಗಳಿಂದ ದೂರವಿರಬೇಕು. ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳುವುದು. ಪ್ರತ್ಯೇಕವಾಗಿರುವ ಪ್ರತಿಯೊಬ್ಬ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಂಡಿರಬೇಕು. ಲೊಕೇಷನ್ ಮತ್ತು ವೈಫೈ, ಇಂಟರ್ನೆಟ್ ಬ್ಲೂಟೂತ್ ಆನ್ ಮಾಡಿಕೊಂಡಿರಬೇಕು. ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದೆ.