ETV Bharat / state

ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ: ಪ್ರಹ್ಲಾದ್​​​​​ ಜೋಶಿ

ಹಿಂದಿ ಬೇಡ, ಆದ್ರೆ ಇಂಗ್ಲಿಷ್​​ ಬೇಕು ಅಂತಾ ಕೆಲವರು ಹೇಳ್ತಾರೆ. ಅವರ ತಾತ, ಮುತ್ತಾತರೇನು ಇಂಗ್ಲಿಷಿನವರೇನು? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತ್​ ಶಾ ಹೇಳಿದ್ದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ; ಪ್ರಲ್ಹಾದ ಜೋಶಿ ಸಮರ್ಥನೆ
author img

By

Published : Sep 15, 2019, 4:53 PM IST

ಧಾರವಾಡ: ಹಿಂದಿ ಬೇಡ, ಆದ್ರೆ ಇಂಗ್ಲಿಷ್​​ ಬೇಕು ಅಂತಾ ಕೆಲವರು ಹೇಳ್ತಾರೆ. ಅವರ ತಾತ, ಮುತ್ತಾತರೇನು ಇಂಗ್ಲಿಷಿನವರೇನು? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತ್​ ಶಾ ಹೇಳಿದ್ದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಪ್ರಹ್ಲಾದ್​ ಜೋಶಿ, ಕೇಂದ್ರ ಸಚಿವ

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲಿಷ್​​​ ಕಲಿಯಲು ತಯಾರಿದ್ದೇವೆ. ಇಂಗ್ಲಿಷ್​​​ ಮಾಧ್ಯಮ ಶಾಲೆ ಸ್ವಾಗತಿಸುವ ಒಂದು ವರ್ಗ ಕೂಡ ಇದೆ.‌ ಆದರೆ ಹಿಂದಿ ಕಲಿಯಬೇಕು ಅಂತ ಹೇಳಿದ್ರೆ ಯಾಕಿಷ್ಟು ವಿರೋಧ ಮಾಡ್ತಾರೆ ಗೊತ್ತಿಲ್ಲ. ಮೆಟ್ರೋದಲ್ಲಿ ಇಂಗ್ಲಿಷ್​​ ಬೋರ್ಡ್ ನಡೆಯುತ್ತೆ. ಹಿಂದಿ ಬೋರ್ಡ್ ತೆಗಿಬೇಕು ಅಂದರೆ ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಇನ್ನು ನೆರೆ ಪರಿಹಾರದ ತರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಾವೇ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಮನಮೋಹನ್​​ ಸಿಂಗ್ ಸರ್ಕಾರ ಇದ್ದಾಗ ಎಷ್ಟು ಕೊಟ್ಟಿದ್ರು, ನಾವೆಷ್ಟು ಕೊಟ್ಟಿದೇವೆ ಅಂತಾ ಟ್ರ್ಯಾಕ್ ರೆಕಾರ್ಡ್ ನೋಡಲಿ. ಸದ್ಯ ಹತ್ತು ರಾಜ್ಯದಲ್ಲಿ ನೆರೆ ಬಂದಿದೆ. ಹೀಗಾಗಿ ನೆರೆ ಪರಿಹಾರ ಬರುವುದು ವಿಳಂಬ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರ ಬಗ್ಗೆ ಮತ್ತೊಮ್ಮೆ ಮಾತನಾಡಿ ಒತ್ತಡ ಹಾಕುತ್ತೇವೆ ಎಂದರು.

ಡಿಕೆಶಿ ಪ್ರಕರಣದಲ್ಲಿ ಏನು ರಾಜಕೀಯ ಮಾಡುತ್ತಿದ್ದೇವೆ ಅಂತಾ ಸ್ಪಷ್ಟಪಡಿಸಲಿ. ಒಂದು ಜನಾಂಗದ ಕೆಲವರನ್ನು ಕರೆದುಕೊಂಡು ಹೋಗಿ ಪ್ರತಿಭಟಿಸುವ ಪ್ರಯತ್ನವನ್ನೂ ಮಾಡಿದ್ರು. ಡಿಕೆಶಿಗೆ ನೂರಾರು ಕೋಟಿ ಯಾವಾಗ? ಎಲ್ಲಿಂದ ಬಂತು ಜನತೆಗೆ ತಿಳಿಸಬೇಕಲ್ವಾ? ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಇವರ ಬೇಲ್ ರದ್ದು ಮಾಡಿವೆ. ಹೀಗಿರುವಾಗ ಹೇಗೆ ರಾಜಕೀಯ ಅಂತಾ ಕಾಂಗ್ರೆಸ್ ಹೇಳುತ್ತೆ ಎಂದರು.

Intro:ಧಾರವಾಡ: ರಾಜ್ಯದಲ್ಲಿ ಹಿಂದಿ ಹೇರಿಕೆ ವಿಚಾರಕ್ಕೆ ಒಂದು ದೇಶ ಒಂದು ಭಾಷೆ ವಿಚಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಬೇಡ ಆದ್ರೆ ಇಂಗ್ಲೀಷ್ ಬೇಕು ಅಂತಾ ಕೆಲವರು ಹೇಳ್ತಾರೆ. ಅವರ ತಾತ ಮುತ್ತಾತರೇನು ಇಂಗ್ಲೀಷನವರೇನು? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತಾ ಷಾ ಹೇಳಿದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ ಎಂದು ಸಮರ್ಥಿನೆ ಮಾಡಿಕೊಂಡಿದ್ದಾರೆ.

ಇಂಗ್ಲೀಷ್ ಕಲಿಯಲು ತಯಾರಿದ್ದೇವೆ, ಇಂಗ್ಲೀಷ್ ಮಾಧ್ಯಮ ಸ್ಕೂಲ್ ಸ್ವಾಗತಿಸುವ ಒಂದು ವರ್ಗ ಕೂಡ ಇದೆ.‌ ಆದರೆ ಹಿಂದಿ ಕಲಿಯಬೇಕು ಅಂತ ಹೇಳಿದ್ರೆ ಯಾಕಿಷ್ಟು ವಿರೋಧ ಮಾಡ್ತಾರೆ ಗೊತ್ತಿಲ್ಲ, ಮೆಟ್ರೋದಲ್ಲಿ ಇಂಗ್ಲೀಷ್ ಬೋರ್ಡ್ ನಡೆಯುತ್ತೇ ಹಿಂದಿ ಬೋರ್ಡ್ ತೆಗಿಬೇಕು ಅಂದರೆ ಯಾವ ನ್ಯಾಯ ಇದು ಎಂದು ಪ್ರಶ್ನಿಸಿದ್ದಾರೆ.

ನೆರೆಗೆ ಪರಿಹಾರದ ತರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಹಳ ಸ್ಟ್ರಾಂಗ್ ಸಿಎಂ ಇದ್ದಾಗ ನಾವೇ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಮನಮೋಹನಸಿಂಗ್ ಸರ್ಕಾರ ಇದ್ದಾಗ ಎಷ್ಟು ಕೊಟ್ಟಿದ್ರು ನಾವೆಷ್ಟು ಕೊಟ್ಟಿದೇವೆ ಅಂತಾ ಟ್ರ್ಯಾಕ್ ರಿಕಾರ್ಡ್ ನೋಡಲಿ. ಸದ್ಯ ಹತ್ತು ರಾಜ್ಯದಲ್ಲಿ ನೆರೆ ಬಂದಿದೆ ಹೀಗಾಗಿ ನೆರೆ ಪರಿಹಾರ ಬರುವುದು ವಿಳಂಬ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರ ಬಗ್ಗೆ ಮತ್ತೊಮ್ಮೆ ಮಾತನಾಡಿ ಒತ್ತಡ ಹಾಕುತ್ತೇವೆ ಎಂದು ಸಿದ್ದುಗೆ ಟಾಂಗ್ ನೀಡಿದರು.

ಡಿಕೆಶಿ ಪ್ರಕರಣದಲ್ಲಿ ಏನು ರಾಜಕೀಯ ಮಾಡುತ್ತಿದ್ದೇವೆ ಅಂತಾ ಸ್ಪಷ್ಟಪಡಿಸಲಿ. ಒಂದು ಜನಾಂಗದ ಕೆಲವರನ್ನು ಕರೆದುಕೊಂಡು ಹೋಗಿ ಪ್ರತಿಭಟಿಸುವ ಪ್ರಯತ್ನವನ್ನೂ ಮಾಡಿದ್ರು, ಡಿಕೆಶಿಗೆ ನೂರಾರು ಕೋಟಿ ಯಾವಾಗ ಎಲ್ಲಿಂದ ಬಂತು ಜನತಿಗರ ತಿಳಿಸಬೇಕಲ್ವ, ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಇವರ ಬೆಲ್ ರದ್ದು ಮಾಡಿವೆ. ಹೀಗಿರುವಾಗ ಹೇಗೆ ರಾಜಕೀಯ ಅಂತಾ ಕಾಂಗ್ರೆಸ್ ಹೇಳುತ್ತೆ ಎಂದರು.Body:ದುಬೈನಲ್ಲಿ ತೈಲ ಘಟಕಗಳ ದ್ರೋನ್ ದಾಳಿ ವಿಚಾರ ದುಬೈ ನಮಗೆ ತೈಲ ಪೂರೈಸುವ ರಾಷ್ಟ್ರ. ಆದರೂ ನಮಗೆ ಬೇರೆ ಬೇರೆ ತೈಲ ಮೂಲಗಳು ಇವೆ ಎಂದರು.

ಮಹದಾಯಿ ವಿವಾದವನ್ನು ಗೋವಾ ಸಿಎಂ ನ್ಯಾಯಾಲಯದ ಮೂಲಕವೇ ಬಗೆಹರಿಸಿಕೊಳ್ತೇವಿ ಅಂದಿದ್ದಾರೆ. ಆದರೂ ನಾವ ಜಲಮಂತ್ರಿಗಳ ಮೂಲ‌ಕ ಇನ್ನೂ ಮೂರು ಸಿಎಂಗಳ ಮಾತುಕತೆಗೆ ಪ್ರಯತ್ನಿಸ್ತೇವಿ. ಮೂರು ರಾಜ್ಯದಲ್ಲಿ ಒಂದೇ ಪಕ್ಷ ಇದ್ದ ಮಾತ್ರಕ್ಕೆ ಸಮಸ್ಯೆ ಇತ್ಯರ್ಥವಾಗದು ಎಂದರು..

ಬೈಟ್: ಪ್ರಲ್ಹಾದ ಜೋಶಿ, ಕೇಂದ್ರ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.