ಹುಬ್ಬಳ್ಳಿ: ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಮನೆ ಗೋಡೆ ಬಿದ್ದಿರುವ ಘಟನೆ ನಗರದ ಮಂಟೂರ ರೋಡ್ ಅಂಬೇಡ್ಕರ್ ಕಾಲೋನಿ ಫಸ್ಟ್ ಕ್ರಾಸ್ ಬಳಿ ನಡೆದಿದೆ.
ಸಹಜಾದಬಿ ಲತಿಫನವರ ಅವರಿಗೆ ಸೇರಿದ ಮನೆಯಾಗಿದ್ದು, ಮನೆಯ ಒಂದು ಭಾಗದ ಗೋಡೆ ಸಂಪೂರ್ಣವಾಗಿ ನೆಲಕಚ್ಚಿದೆ. ಈ ಕುಟುಂಬದಲ್ಲಿ ಮೂರು ಜನರಿದ್ದು, ಗೋಡೆ ಬಿದ್ದಿರುವುದರಿಂದ ಬೀದಿಪಾಲಾಗಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಕುಟುಂಬಕ್ಕೆ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.