ಹುಬ್ಬಳ್ಳಿ: ರಾಜ್ಯದಲ್ಲಿ ಜೂನ್ 11ರಿಂದ ಜಾರಿಗೆ ಬರುವ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದ "ಶಕ್ತಿ ಯೋಜನೆ" ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ನೀಡುವುದಕ್ಕಾಗಿ ವಿಶೇಷ ಮಾದರಿಯ ಬಸ್ ಟಿಕೆಟ್ ವಿನ್ಯಾಸಗೊಳಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 55 ಬಸ್ ಡಿಪೋಗಳು ಹಾಗೂ 173 ಬಸ್ ನಿಲ್ದಾಣಗಳಿವೆ. ವಾರ್ಷಿಕ ಸರಾಸರಿ 4505 ಬಸ್ಗಳು ನಿತ್ಯ 15.05ರಿಂದ 15.25 ಲಕ್ಷ ಕಿಲೋ ಮೀಟರ್ ಸಂಚರಿಸುತ್ತವೆ. ಒಟ್ಟು 16.40 ರಿಂದ 17.50 ಲಕ್ಷ ಜನರು ಪ್ರಯಾಣ ಮಾಡುತ್ತಾರೆ.
ಇದನ್ನೂ ಓದಿ: ಹಲವು ಕಂಡಿಷನ್ ಹಾಕಿ ಯಾರಿಗೂ ಗ್ಯಾರಂಟಿ ಯೋಜನೆಗಳು ಸಿಗದಂತೆ ಮಾಡುವ ಹುನ್ನಾರ: ಪ್ರಲ್ಹಾದ್ ಜೋಶಿ
ಅವುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಮತಿಸಲಾಗಿರುವ ನಗರ ಸಾರಿಗೆ, ಉಪ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಮಾದರಿಯ 4167 ಬಸ್ಸುಗಳಿವೆ. ಈ ಬಸ್ಸುಗಳಲ್ಲಿ ಪ್ರತಿದಿನ ಸರಾಸರಿ 15 ರಿಂದ15.50 ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಅವರ ಪೈಕಿ 7-0 ರಿಂದ ರಿಂದ 7.50 ಲಕ್ಷ ದಷ್ಟು ಮಹಿಳೆಯರು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಗೆ ಮನೆಯೊಡತಿಯ ಮಗನ ತೆರಿಗೆ ಪಾವತಿ ಪರಿಗಣಿಸುವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮಹಿಳೆಯರಿಗೆ ಶೂನ್ಯ ಟಿಕೆಟ್: ಪ್ರತಿ ಬಸ್ಸಿನಲ್ಲಿ ಪ್ರಯಾಣ ಮಾಡಿದ ಒಟ್ಟು ಪ್ರಯಾಣಿಕರು ಹಾಗೂ ಮಹಿಳಾ ಪ್ರಯಾಣಿಕರ ನಿಖರ ಮಾಹಿತಿ ಪಡೆಯಲು ಮಹಿಳಾ ಪ್ರಯಾಣಿಕರಿಗಾಗಿಯೇ ವಿಶೇಷ ಶೂನ್ಯ ಟಿಕೆಟ್ ವಿನ್ಯಾಸಗೊಳಿಸಲಾಗಿದೆ. ಬಸ್ಸಿನಲ್ಲಿ ಪುರುಷ ಪ್ರಯಾಣಿಕರಂತೆ ಮಹಿಳಾ ಪ್ರಯಾಣಿಕರಿಗೂ ಸಹಾ ಟಿಕೆಟ್ ನೀಡಲಾಗುತ್ತದೆ. ಅದರಲ್ಲಿ ಮಹಿಳಾ ಪ್ರಯಾಣಿಕರು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ, ಪ್ರಯಾಣ ದರದ ವಿವರಗಳು ಇರಲಿದೆ. ಟಿಕೆಟ್ ಕೊನೆಯಲ್ಲಿ ಒಟ್ಟು ಮೊತ್ತ ಶೂನ್ಯ ಎಂದು ಮುದ್ರಿತ ವಾಗುತ್ತದೆ. ಆದ್ದರಿಂದ ಅದನ್ನು 'ಶೂನ್ಯ ಟಿಕೆಟ್' ಎಂದು ಕರೆಯಲಾಗುತ್ತದೆ. ಈ ಟಿಕೆಟ್ಗೆ ಮಹಿಳಾ ಪ್ರಯಾಣಿಕರು ನಿರ್ವಾಹಕರಿಗೆ ಯಾವುದೆ ಹಣ ನೀಡಬೇಕಾಗಿರುವುದಿಲ್ಲ. ಆದರೆ ಟಿಕಟ್ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ 'ಪುಣ್ಯಕೋಟಿ'; ಚಿರತೆ ಹಿಮ್ಮೆಟ್ಟಿಸಲು ಹಸುವಿಗೆ ಸಾಥ್ ಕೊಟ್ಟ ಶ್ವಾನ!
ಸಂವಿಧಾನ ಬದಲಿಸಲು ಬಂದವರನ್ನೇ ಬದಲಾಯಿಸಿದ್ದೇವೆ, 2024ರ ಲೋಕಸಭೆ ಚುನಾವಣೆಯಲ್ಲೂ ಇದು ಮರುಕಳಿಸಲಿ: ಸಿಎಂ ಸಿದ್ದರಾಮಯ್ಯ