ಹುಬ್ಬಳ್ಳಿ: ನಗರದ ಒಬ್ಬರಿಗೆ ಖದೀಮರು ಸಿಮ್ ಡಾಕ್ಯುಮೆಂಟ್ ವೆರಿಫಿಕೇಷನ್ ಪೆಂಡಿಂಗ್ ಇದೆ ಎಂದು ಸಂದೇಶ ಕಳುಹಿಸಿ, ನಂತರ ಕೆವೈಸಿ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ ಲೋಡ್ ಮಾಡಿಸಿ ಅದರ ಮೂಲಕ ಯುಪಿಐ ಪಿನ್ ತಿಳಿದುಕೊಂಡು ಅಂದಾಜು 99,324 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗೋಕುಲ ರಸ್ತೆ ಗಾಂಧಿನಗರದ ಧರ್ಮರಾಜ ಎಂಬುವರ ಮೊಬೈಲ್ಗೆ ಸಿಮ್ ದಾಖಲೆ ಪರಿಶೀಲನೆ ಬಾಕಿ ಇದೆ ಎಂಬ ಸಂದೇಶ ಕಳುಹಿಸಿದ್ದಾರೆ. ನಂತರ ಟೀಮ್ ವೀವರ್ ಕ್ವಿಕ್ ಸಪೋರ್ಟ್ ಥ್ಯಾಂಕ್ಸ್ ಆ್ಯಪ್ ನಿಂದ 10 ರೂ. ರಿಚಾರ್ಜ್ ಮಾಡಲು ಹೇಳಿ ಯುಪಿಐ ಪಿನ್ ತಿಳಿದುಕೊಂಡು, ನಂತರ ಧರ್ಮರಾಜ ಮತ್ತು ಅವರ ಪತ್ನಿಯ ಬ್ಯಾಂಕ್ ಖಾತೆಗಳಿಂದ ಅವರಿಗೆ ಗೊತ್ತಾಗದಂತೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ