ETV Bharat / state

ಮಹೇಶ ತೆಂಗಿನಕಾಯಿಯನ್ನು ಪಕ್ಷದಿಂದ ಕೈ ಬಿಡುವಂತೆ ಶಿವಾನಂದ ಮುತ್ತಣ್ಣವರ ಆಗ್ರಹ

author img

By

Published : Mar 13, 2020, 3:07 AM IST

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಅವರು, ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಬಿಎಸ್​​ವೈ ಮಾತನಾಡಿದ್ದ ವಿಡಿಯೋ ವೈರಲ್ ಮಾಡಿದ್ದಾರೆ. ಹಾಗಾಗಿ ಅವರನ್ನು ಪಕ್ಷದಿಂದ ಕೈ ಬೀಡಬೇಕು ಎಂದು ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಆಗ್ರಹಿಸಿದ್ದಾರೆ.

Mahesh Tenginakayi
ಮಹೇಶ ತೆಂಗಿನಕಾಯಿಯನ್ನು ಪಕ್ಷದಿಂದ ಕೈ ಬಿಡುವಂತೆ ಶಿವಾನಂದ ಮುತ್ತಣ್ಣವರ ಆಗ್ರಹ

ಹುಬ್ಬಳ್ಳಿ: ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಬಿಎಸ್​​ವೈ ಮಾತನಾಡಿದ್ದ ವಿಡಿಯೋ ವೈರಲ್ ಮಾಡಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಎಂದು ಮಾಜಿ ಪಾಲಿಕೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ನೇರವಾಗಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಒಂದು ಉತ್ಕೃಷ್ಟ ಮಟ್ಟದ ಗೌರವವನ್ನು ಇಟ್ಟುಕೊಂಡಿದೆ. ಆದರೆ ಮಹೇಶ ತೆಂಗಿನಕಾಯಿಯಂತಹ ಮುಖಂಡರು ಭಾರತೀಯ ಜನತಾ ಪಾರ್ಟಿಯ ಮುಖಕ್ಕೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಪಕ್ಷದಿಂದ ಕೈ ಬೀಡಬೇಕು ಎಂದು ಆಗ್ರಹಿಸಿದರು.

ಖಾಸಗಿ ಹೋಟೆಲ್​​​​ನಲ್ಲಿ ನಡೆದ ಸಭೆಯಲ್ಲಿ ಸಿಎಂ ಭದ್ರತೆಗೆ ಎಂದು ಮಹೇಶ ತೆಂಗಿನಕಾಯಿ ತಮ್ಮ ಬೆಂಬಲಿಗರನ್ನು ಸಭೆಯ ಒಳಗೆ ಬಿಟ್ಟಿದ್ದರು. ಅವರಿಂದ ಸಭೆಯಲ್ಲಿ ನಡೆದ ಬೆಳವಣಿಗೆಯನ್ನು ವಿಡಿಯೋ ಮಾಡಿ ಬಹಿರಂಗಗೊಳಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುವ ಏಕಪಕ್ಷಿಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲದೇ ಬಿಜೆಪಿ ಹೆಸರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವುದು ಖಂಡನೀಯವಾಗಿದೆ. ಪಕ್ಷದ ವಿರುದ್ಧದ ಕೆಲಸದಲ್ಲಿ ಭಾಗಿಯಾಗಿರುವ ಇಂತವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.