ಹುಬ್ಬಳ್ಳಿ: ಸೆನ್ಸಾರ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ತಾಂತ್ರಿಕತೆಯನ್ನು ಕೆಎಲ್ಇ ಇಂಜಿನಿಯರ್ ಕಾಲೇಜು ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದೆ.
ಸಾಂಕ್ರಾಮಿಕ ಕೊರೊನಾ ಸೋಂಕು ತಡೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ. ಆದರೆ, ಸ್ಯಾನಿಟೈಸರ್ ಅನ್ನು ಎಲ್ಲರೂ ಮುಟ್ಟಿ ಬಳಸುವುದರಿಂದ ಕೊರೊನಾ ಹರಡುವ ಸಾಧ್ಯತೆ ಇದೆ.
ಅದಕ್ಕಾಗಿ ವಿದ್ಯಾರ್ಥಿಗಳ ತಂಡ ಸೆನ್ಸಾರ್ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಸರ್ ನಿರ್ಮಿಸಿದ್ದಾರೆ. ಆಸ್ಪತ್ರೆಗಳಲ್ಲಿ ಪಿ.ಪಿ.ಕಿಟ್ ಧರಿಸಿರುವ ವೈದ್ಯರು ಹಾಗೂ ಶುಶ್ರೂಷಕಿಯರಿಗೆ ಸೆನ್ಸಾರ್ ಆಧಾರಿತ ಸ್ಯಾನಿಟೈಸರ್ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಾದ ಕಾರ್ತಿಕ್.ವಿ.ಆರ್. ಅಭಿಲಾಷ್ .ಜಿ, ವಿನಾಯಕ, ಪ್ರವೀಣ, ಸಂತೋಷ್, ಅಭಿಲಾಷ್.ಕೆ ಸೆನ್ಸಾರ್ ಆಧರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಸರ್ ನಿರ್ಮಿಸಿದ್ದಾರೆ.
ಕೆಎಲ್ಇ ಮೆಕ್ಯಾನಿಕಲ್ ವಿಭಾಗ ಪ್ರಾಧ್ಯಾಪಕ ರವಿ ಗುಟ್ಟಾಲ್ ಹಾಗೂ ಕಿಮ್ಸ್ ವೈದ್ಯ ಎಸ್.ವಿ.ಮುಲ್ಕಿಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅವರಿಗೆ ಹಸ್ತಾಂತರಿಸಲಾಗಿದೆ.