ಧಾರವಾಡ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಹಾಗೂ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸ್ಲಂ ನಿವಾಸಿಗಳು, ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿರುವ ಅಘೋಷಿತ ಸ್ಲಂಗಳನ್ನು ಘೋಷಣೆ ಮಾಡುವುದು. ಘೋಷಣೆಯಾದ ಸ್ಲಂಗಳ ಮನೆಗಳಿಗೆ ನೋಂದಣಿ ಪತ್ರ ನೀಡುವುದು. ಸ್ಲಂ ನಿವಾಸಿಗಳು ವಾಸಿಸುವ ಮನೆಗಳನ್ನು ತೆರವು ತೆರವುಗೊಳಿಸುವುದನ್ನು ತಡೆಹಿಡಿಯಬೇಕು. ಆಹಾರ ಪಡಿತರಕ್ಕೆ ಬಯೋಮೆಟ್ರಿಕ್ ನೀಡುವುದನ್ನು ರದ್ದು ಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮನವಿ ಸಲ್ಲಿಸಿದರು.