ETV Bharat / state

​ಧಾರವಾಡ: ಚರ್ಮ ಕುಟೀರ ತೆರವು ವಿರೋಧಿಸಿ ಪ್ರತಿಭಟನೆ - ಲಿಡ್ಕರ್​ ಚರ್ಮ ಕುಟೀರ

​ಚರ್ಮ ಕುಟೀರಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಸಮಗಾರ ಹರಳಯ್ಯ ಸಮಾಜ ಮತ್ತು ಎಸ್​​​ಯುಸಿಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

protest-against-the-evacuation-of-the-leather-cottage
​ಧಾರವಾಡ: ಚರ್ಮ ಕುಟೀರ ತೆರವು ವಿರೋಧಿಸಿ ಪ್ರತಿಭಟನೆ
author img

By

Published : Jan 2, 2021, 4:13 PM IST

ಧಾರವಾಡ: ಡಾ.ಬಾಬು ಜಗಜೀವನ ರಾಮ್​ ಹಾಗೂ ಲಿಡ್ಕರ್​ ಚರ್ಮ ಕುಟೀರಗಳನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಸಮಗಾರ ಹರಳಯ್ಯ ಸಮಾಜ ಮತ್ತು ಎಸ್​​​ಯುಸಿಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

​ಧಾರವಾಡ: ಚರ್ಮ ಕುಟೀರ ತೆರವು ವಿರೋಧಿಸಿ ಪ್ರತಿಭಟನೆ

ನಗರದ ಕಲಾಭವನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ವಿವಿಧ ಮಾರ್ಗಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಸಮಗಾರ ಜನಾಂಗ ಅನಾದಿ ಕಾಲದಿಂದಲೂ ತಮ್ಮ ಕುಲಕಸುಬು ಮಾಡಿ ಜೀವನ ನಡೆಸುತ್ತಿದೆ. ರಸ್ತೆ ಪಕ್ಕದಲ್ಲಿ ಕುಳಿತು ಕೆಲಸ ಮಾಡಿ‌ ಉಪಜೀವನ ನಡೆಸುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಾಲಿಕೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡದೆ ಉದ್ದೇಶಪೂರ್ವಕವಾಗಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.

ತಕ್ಷಣವೇ ಕಾರ್ಯಾಚರಣೆ ನಿಲ್ಲಿಸಿ ಉಪಜೀವನ ಮಾಡಲು ಅನುಕೂಲ ‌ಮಾಡಿಕೊಡಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.