ETV Bharat / state

ಪ್ರತಿ ಜಿಲ್ಲೆಯಲ್ಲೂ ಟ್ರಕ್ ಟರ್ಮಿನಲ್ ನಿರ್ಮಾಣ; ಡಿ.ಎಸ್. ವೀರಯ್ಯ - ಅಂಚಟಗೇರಿಯಲ್ಲಿ ಉದ್ದೇಶಿತ ಟ್ರಕ್ ಟರ್ಮಿನಲ್

ಅಂಚಟಗೇರಿಯ 43.38 ಎಕರೆ ವಿಸ್ತೀರ್ಣದಲ್ಲಿ 2000 ಟ್ರಕ್ ನಿಲುಗಡೆ, 1500 ದ್ವಿಚಕ್ರ, 700 ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸಾಮರ್ಥ್ಯವುಳ್ಳ ಆಧುನಿಕ ಸೌಲಭ್ಯವುಳ್ಳ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದರು.

Proposed government on construction of truck terminals metropolis
ಡಿ.ಎಸ್.ವೀರಯ್ಯ
author img

By

Published : Jan 16, 2021, 6:00 PM IST

ಹುಬ್ಬಳ್ಳಿ: ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ಮಹಾನಗರಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದರು.

Proposed government on construction of truck terminals metropolis
ಡಿ.ಎಸ್.ವೀರಯ್ಯ

ಓದಿ: ಐಎಂಎ ಹಗರಣ: ಸಕ್ಷಮ ತನಿಖಾ ಪ್ರಾಧಿಕಾರಕ್ಕೆ ದಕ್ಷ ಅಧಿಕಾರಿಗಳ ನೇಮಕ

ಅಂಚಟಗೇರಿಯಲ್ಲಿ ಉದ್ದೇಶಿತ ಟ್ರಕ್ ಟರ್ಮಿನಲ್ ಸ್ಥಳ ವೀಕ್ಷಿಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲೂ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಿರ್ಮಾಣಕ್ಕೆ ಅಗತ್ಯ ಇರುವ ಜಮೀನುಗಳನ್ನು ನೀಡುವಂತೆ ಕೋರಲಾಗಿದೆ. ಸರ್ಕಾರಿ ಜಮೀನುಗಳು ಲಭ್ಯವಿರದಿದ್ದರೆ, ನಿಗಮದ ವತಿಯಿಂದ ಖಾಸಗಿ ಜಮೀನು ಖರೀದಿ ಮಾಡಲಾಗುವುದು. ಈ ಬಾರಿಯ ಆಯವ್ಯಯದಲ್ಲಿ 2 ರಿಂದ 3 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಲಾಗುವುದು ಎಂದರು.

ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ:

ಹುಬ್ಬಳ್ಳಿ ಅಂಚಟಗೇರಿಯಲ್ಲಿ 56 ಎಕರೆ ಜಮೀನು ಮಂಜೂರಾಗಿದ್ದು, ಇದರಲ್ಲಿ 4 ಎಕರೆ ಜಮೀನು ಗ್ರಾಮಕ್ಕೆ ಹೊಂದಿಕೊಂಡಂತಿದೆ. ಇದನ್ನು ಗ್ರಾಮಕ್ಕೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಟರ್ಮಿನಲ್ ಬದ್ದವಾಗಿರಲಿದೆ. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ವಿವಾದಿತ ಜಮೀನು ಕುರಿತು ನಿರ್ಧಾರಕ್ಕೆ ಬರಲಾಗುವುದು.

ಅಂಚಟಗೇರಿಯ 43.38 ಎಕರೆ ವಿಸ್ತೀರ್ಣದಲ್ಲಿ 2000 ಟ್ರಕ್ ನಿಲುಗಡೆ, 1500 ದ್ವಿಚಕ್ರ, 700 ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸಾಮರ್ಥ್ಯವುಳ್ಳ ಆಧುನಿಕ ಸೌಲಭ್ಯವುಳ್ಳ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು. ಯೋಜನೆ ಮೊತ್ತ 228 ರೂ. ಕೋಟಿಯಾಗಿದ್ದು, ಉತ್ತಮ ಸಂಪರ್ಕ ರಸ್ತೆ, ಉಗ್ರಾಣ ಹಾಗೂ ಸಂಗ್ರಹ ವ್ಯವಸ್ಥೆ, ಪೊಲೀಸ್ ಠಾಣೆ, ಪೆಟ್ರೋಲ್ ಬಂಕ್, ಭೋಜನ ಶಾಲೆ, ಸ್ನಾನ ಶೌಚಾಲಯ ವ್ಯವಸ್ಥೆವುಳ್ಳ ವಸತಿ, ಎಟಿಎಂ, ಮನೋರಂಜನಾ ಸ್ಥಳ, ಆಸ್ಪತ್ರೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳವುಳ್ಳ ಟ್ರಕ್ ಟರ್ಮಿನಲ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ರಾಜ್ಯ ಸರ್ಕಾರ 2018-19ರ ಆಯವ್ಯಯದಲ್ಲಿ 110 ಕೋಟಿ ರೂಪಾಯಿಗಳನ್ನು ಅಂಚಟಗೇರಿ ಟ್ರಕ್ ಟರ್ಮಿನಲ್ ನಿರ್ಮಿಸಲು ಮೀಸಲಿಟ್ಟಿತ್ತು. ಸರ್ಕಾರ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಒಪ್ಪದಿದ್ದರೆ, 200 ಕೋಟಿ ರೂ. ಹಣವನ್ನು ಈ ಬಾರಿಯ ಅಯವ್ಯಯದಲ್ಲಿ ನೀಡುವಂತೆ ಕೋರಲಾಗುವುದು. ನಿಗಮದ ವತಿಯಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ದಾವಣಗೆರೆ ಹಾಗೂ ಹೊಸಪೇಟೆ ನಗರಗಳಲ್ಲಿ ಖಾಸಗಿ ಜಮೀನು ಖರೀದಿ ಮಾಡಲಾಗಿದೆ. ನಿಗಮ ಸ್ಥಾಪನೆಯಾದಾಗಿನಿಂದಲೂ ಖಾಸಗಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಇದನ್ನು ತಪ್ಪಿಸಿ ಯಶವಂತಪುರ ಟರ್ಮಿನಲ್ ನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಭವನ ನಿರ್ಮಿಸಲಾಗುವುದು. ನಿಗಮದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.