ಹುಬ್ಬಳ್ಳಿ: ಜೈಲಿನಿಂದ ಪರಾರಿಯಾಗುತ್ತಿದ್ದ ಖೈದಿ ಬೆನ್ನಟ್ಟಿ ಹಿಡಿದ ಪೊಲೀಸರು - ಹುಬ್ಬಳ್ಳಿ ವಿಚಾರಣಾಧೀನ ಖೈದಿ ಪರಾರಿ ಯತ್ನ
ಹುಬ್ಬಳ್ಳಿ ಸಬ್ ಜೈಲಿನ ಗೋಡೆ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದ ವಿಚಾರಣಾಧೀನ ಖೈದಿಯೊಬ್ಬನನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

ಹುಬ್ಬಳ್ಳಿ: ಜೈಲಿನಿಂದ ಪರಾರಿಯಾಗುತ್ತಿದ್ದ ಖೈದಿ ಬೆನ್ನಟ್ಟಿ ಹಿಡಿದ ಪೊಲೀಸರು
ಹುಬ್ಬಳ್ಳಿ: ಇಲ್ಲಿನ ವಿಶ್ವೇಶ್ವರ ನಗರದ ಸಬ್ ಜೈಲಿನಿಂದ ವಿಚಾರಣಾಧೀನ ಖೈದಿಯೊಬ್ಬ ಗೋಡೆ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ವಿಚಾರಣಾಧೀನ ಖೈದಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.
ಸಂಜೆ ಸಮಯದಲ್ಲಿ ಯಾರೂ ಇಲ್ಲದ್ದನ್ನೇ ದುರುಪಯೋಗಪಡಿಸಿಕೊಂಡ ಖೈದಿಯು ಜೈಲಿನ ಗೋಡೆಯನ್ನೇರಿ ಕೆಳಗೆ ಹಾರಿದ್ದಾನೆ. ನಂತರ ನೃಪತುಂಗ ಬೆಟ್ಟದ ಸಮೀಪ ಅಡಗಿಕೊಳ್ಳಲು ಯತ್ನಿಸಿದ್ದಾನೆ. ಮಾಹಿತಿ ತಿಳಿದ ಅಶೋಕ ನಗರ ಪೊಲೀಸರು ಖೈದಿಯನ್ನು ಬೆನ್ನಟ್ಟಿ ಸೆರೆಹಿಡಿದು ಜೈಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪೊಲೀಸರು ಖೈದಿ ಬೆನ್ನಟ್ಟಿ ತೆರಳುತ್ತಿರುವುದನ್ನು ಕಂಡ ಜನರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.