ETV Bharat / state

35 ವರ್ಷಗಳ ಬಳಿಕ ರಾಷ್ಟ್ರಪತಿ ಸನ್ಮಾನಕ್ಕೆ ಪೂರ್ವ ಸಿದ್ಧತೆ: ಭರದಿಂದ ಸಾಗಿದ ಕಾರ್ಯ - ಕರ್ನಾಟಕ ಜಿಮಖಾನಾ ಕ್ಲಬ್‌ ಶೃಂಗಾರ

ಸೆಪ್ಟೆಂಬರ್​ 26ರಂದು ಹುಬ್ಬಳ್ಳಿಗೆ ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಕ್ಲಬ್‌ ಶೃಂಗಾರಗೊಳ್ಳುತ್ತಿದೆ.

ರಾಷ್ಟ್ರಪತಿ ಸನ್ಮಾನಕ್ಕೆ ಪೂರ್ವ ಸಿದ್ಧತೆ
ರಾಷ್ಟ್ರಪತಿ ಸನ್ಮಾನಕ್ಕೆ ಪೂರ್ವ ಸಿದ್ಧತೆ
author img

By

Published : Sep 21, 2022, 5:41 PM IST

ಹುಬ್ಬಳ್ಳಿ: ಸುಮಾರು ಮೂರೂವರೆ ದಶಕಗಳ ಬಳಿಕ ರಾಷ್ಟ್ರಪತಿಯವರಿಗೆ ಪೌರಸನ್ಮಾನ ನೀಡುತಿದ್ದು, ಎರಡನೇ ಬಾರಿಗೆ ರಾಷ್ಟ್ರದ ಪ್ರಥಮ ಪ್ರಜೆಗೆ ಪೌರಸನ್ಮಾನ ಮಾಡುವ ಭಾಗ್ಯವನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಪಡೆದುಕೊಂಡಿದೆ.

ಹುಬ್ಬಳ್ಳಿಯ ಮೇಯರ್ ಈರೇಶ ಅಂಚಟಗೇರಿ ಅವರು ಮಾತನಾಡಿದರು

ಈ ಕುರಿತು ಮೇಯರ್ ಈರೇಶ ಅಂಚಟಗೇರಿ ಅವರು ಮಾತನಾಡಿ, ಸೆ. 26ರಂದು ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಕ್ಲಬ್‌ ಶೃಂಗಾರಗೊಳ್ಳುತ್ತಿದೆ. ರಾಜ್ಯ - ದೇಶ, ವಿದೇಶಗಳ ಅತ್ಯುನ್ನತ ಸ್ಥಾನದಲ್ಲಿದ್ದವರು, ಮೇರು ಕಲಾವಿದರು, ಯೋಧರು, ಸಾಧಕರಿಗೆ ಮಹಾನಗರ ಪಾಲಿಕೆ ಪೌರಸನ್ಮಾನ ಕೈಗೊಳ್ಳುತ್ತದೆ.

ರಾಷ್ಟ್ರಪತಿಗೆ ಸನ್ಮಾನ: ಮಹಾನಗರದ ಜನತೆಯ ಪರವಾಗಿ ಈ ಸನ್ಮಾನ ಸಲ್ಲಿಕೆಯಾಗುತ್ತದೆ. ಪಾಲಿಕೆ ಅಸ್ತಿತ್ವಕ್ಕೆ ಬಂದು 60 ವರ್ಷಗಳಾಗಿದ್ದು, ಹಲವು ಗಣ್ಯರು, ಕಲಾವಿದರು, ಸಾಧಕರಿಗೆ ಪೌರಸನ್ಮಾನ ಸಲ್ಲಿಸುತ್ತ ಬಂದಿದೆ. ಇದೀಗ ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗುತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರ ವಿಶೇಷ ಮುತುವರ್ಜಿಯೊಂದಿಗೆ ರಾಷ್ಟ್ರಪತಿಯವರಿಗೆ ಪೌರಸನ್ಮಾನದ ಅವಕಾಶ ಹು - ಧಾ ಮಹಾನಗರ ಪಾಲಿಕೆಗೆ ಲಭ್ಯವಾಗಿದೆ. ಐಐಐಟಿ ಉದ್ಘಾಟನೆಗೆಂದು ರಾಷ್ಟ್ರಪತಿಯವರು ಸೆ. 26ರಂದು ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಆಗಮಿಸುತ್ತಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಪೌರಸನ್ಮಾನ ನಡೆಯಲಿದೆ.

1986-87ರಲ್ಲಿ ಗ್ಯಾನಿ ಜೈಲ್‌ಸಿಂಗ್‌ ಅವರು ಹುಬ್ಬಳ್ಳಿಗೆ ಆಗಮಿಸಿದಾಗ ಪಾಲಿಕೆಯಿಂದ ಪೌರಸನ್ಮಾನ ನೀಡಲಾಗಿತ್ತು. ಇದೀಗ ಸುಮಾರು 35 ವರ್ಷಗಳ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗುತ್ತಿದೆ.

ರಾಜಕಾಲುವೆ ಸ್ವಚ್ಛತೆ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಿಂದ ರಸ್ತೆ ಸ್ವಚ್ಛತೆ ಸೇರಿದಂತೆ ಹಲವು ತಯಾರಿ ಕಾರ್ಯಗಳು ಹಗಲು-ರಾತ್ರಿ ಎನ್ನದೇ ನಡೆಯುತ್ತಿವೆ. ಗೋಕುಲ ರಸ್ತೆ ಸ್ವಚ್ಛಗೊಳಿಸುವ, ಪೇಂಟಿಂಗ್‌ ಮೂಲಕ ಅಂದಗೊಳಿಸುವ ಕಾರ್ಯ ಒಂದೆಡೆಯಾದರೆ, ಪೌರಸನ್ಮಾನ ನಡೆಯುವ ದೇಶಪಾಂಡೆ ನಗರದ ಮೈದಾನ ಬಳಿಯ ರಾಜಕಾಲುವೆ ಸ್ವಚ್ಛತೆ, ಇನ್ನಿತರ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಓದಿ: ದೇವೇಗೌಡರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.