ಧಾರವಾಡ: ಪಠಾಣ್ ಸಿನೆಮಾದಲ್ಲಿ ದೀಪಿಕಾ ಪಡುಕೋಣೆಯ ಹಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ಪಠಾಣ ಹಾಡಿನ ಮೇಲೆ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಇತ್ತೀಚೆಗೆ ಪಠಾಣ್ ಸಿನೆಮಾ ಹಾಡು ರಿಲೀಸ್ ಆಗಿದೆ. ಅದು ಅಶ್ಲೀಲ ಹಾಗೂ ಅಸಭ್ಯವಾಗಿದೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆಯ ಬೆಶರಂ ಹಾಡಿನಲ್ಲಿ ನಾಚಿಕೆಗೇಡು ಎಂದು ಕೇಸರಿ ಬಣ್ಣದ ಬಗ್ಗೆ ಹಾಡಲಾಗಿದೆ. ಇದಕ್ಕಾಗಿ ದೇಶಾದ್ಯಂತ ಈ ಸಿನಿಮಾ ಹಾಡಿಗಾಗಿ ಬೈಕಾಟ್ ಪಠಾಣ್ ಅಭಿಯಾನ ಆರಂಭ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಶ್ರೀರಾಮ ಸೇನೆ ಕೂಡಾ ಬೈಕಾಟ್ ಬೆಂಬಲಿಸುತ್ತೆ. ಎಲ್ಲ ಕಡೆ ಅಭಿಯಾನ ಪ್ರಾರಂಭ ಮಾಡಿದ್ದೇವೆ. ಹಿಂದಿ ಚಿತ್ರರಂಗ ಮುಂಬೈನಲ್ಲಿ ದಾವುದ್ ಹಾಗೂ ಇಸ್ಮಾಂ ಕೈಯಲ್ಲಿದೆ. ಕಮ್ಯುನಿಸ್ಟರ ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿ ಇದೆ. ಇಲ್ಲಿವರಿಗೆ ನಿರಂತರವಾಗಿ ಹಿಂದೂಗಳ ಮೇಲೆ ಟಾರ್ಗೆಟ್ ಮಾಡಿ ಇದನ್ನ ಕೆಡಿಸುವ ಹಾಗೂ ನಂಬಿಕೆ ಹಾಳು ಮಾಡುವ ಪ್ರವೃತ್ತಿ ಬಂದಿದೆ ಎಂದು ಆರೋಪಿಸಿದರು.
ಸೆನ್ಸಾರ್ ಮಂಡಳಿ ಗಂಭೀರವಾಗಿ ತೆಗೆದುಕೊಳ್ಳಬೇಕು: ಈ ಪಠಾಣ್ ಸಿನೆಮಾದಲ್ಲಿ ಕೇಸರಿ ಬಣ್ಣ ಟಾರ್ಗೆಟ್ ಮಾಡಿ ಬೆಶರಂ ಬಣ್ಣ ಹಾಡು ಹಾಕಲಾಗಿದೆ. ಅದು ಅಶ್ಲೀಲ ಹಾಡು, ಅಸಭ್ಯ ಬಟ್ಟೆಯ ಹಾಡು ಅದು. ಈ ರೀತಿ ವಿರೋಧ ಮಾಡುತ್ತೇವೆ. ಲಿವಿಂಗ್ ಟುಗೆದರ್, ಲವ್ - ಜಿಹಾದ್ ಹಾಗೂ ರೇಪ್ ಆಗಲು ಕಿಡ್ನಾಪ್ ಕೂಡಾ ಆಗುವುದು ಈ ರೀತಿಯ ಮಾನಸಿಕತೆಯ ಚಲನ ಚಿತ್ರಗಳಿಂದಲೇ. ಸೆನ್ಸಾರ್ ಮಂಡಳಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಮಾಜ ಹಾಳು ಮಾಡುವ ಇಂಥ ಚಲನಚಿತ್ರಗಳನ್ನ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ನಾವು ಯಾಕೆ ತಾಳ್ಮೆಯಿಂದ ಇರಬೇಕು: ಪ್ರಕಾಶ್ ರಾಜ್ ಅವರ ಮೇಲೆ ಮುತಾಲಿಕ್ ಗರಂ ಇದನ್ನು ನಟ ಪ್ರಕಾಶ್ರಾಜ್ ಸಮರ್ಥನೆ ಮಾಡಿಕೊಳ್ತಾರೆ. ಸ್ವಾಮಿ ನಾವು ಸಹನೆ ಮಾಡಿಕೊಳ್ಳುತಿದ್ದೇವೆ. ನಾವು ಎಷ್ಟು ದಿನ ಹಿಂದೂ ವಿರೋಧಿ ನೀತಿ ಸಹಿಸಬೇಕು. ಕಳೆದ 50 ವರ್ಷಗಳಿಂದ ಇದನ್ನೇ ಮಾಡುತ್ತ ಬಂದಿದ್ದಿರಾ, ನಮ್ಮನ್ನೆ ಟಾರ್ಗೆಟ್ ಮಾಡಿದ್ದಿರಿ. ಮುಸ್ಲಿಂರು ಬುರ್ಖಾ ಹಾಕಿಕೊಂಡು ಕುಣಿಯಲಿ ನೋಡೋಣ ಎಂದು ಸವಾಲು ಹಾಕಿದರು.
ಕ್ರಿಶ್ಚಿಯನ್ನರು ಚರ್ಚ್ ನಲ್ಲಿ ಡ್ಯಾನ್ಸ್ ಮಾಡಲಿ ನೋಡೊಣ. ಆ ಬಗ್ಗೆ ಪ್ರಕಾಶ್ ರಾಜ್ ಹಾಗೂ ಇನ್ನೊಬ್ಬರು ಮಾತನಾಡಲ್ಲ. ಹಿಂದೂಗಳು ಮಾತ್ರ ತಾಳ್ಮೆಯಿಂದ ಇರಬೇಕು. ಹೀಗೆ ತಾಳ್ಮೆಯಿಂದ ಇದ್ದವರನ್ನ ಪ್ರಚೋದನೆ ಮಾಡಲಾಗುತ್ತಿದೆ. ನಿಮಗೆ ಸಮಾಜದ ಮೇಲೆ ಪರಿಣಾಮ ಬೀರುವ ಬಗ್ಗೆ ಯೋಚನೆ ಇಲ್ಲ. ನಾವು ಯಾಕೆ ತಾಳ್ಮೆಯಿಂದ ಇರಬೇಕು. ನಾವು ಸಿಡಿದೇಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಹಿಂದುತ್ವಕ್ಕೆ ದುಡಿದವರು ಬಿಜೆಪಿಗೆ ಬೇಕಿಲ್ಲ, ಅವರಿಗೆ ರೌಡಿಗಳು ಸಾಕು: ಪ್ರಮೋದ್ ಮುತಾಲಿಕ್