ಹುಬ್ಬಳ್ಳಿ: ಕೊರೊನಾದಿಂದ ನಿತ್ಯ ಬಿಕೋ ಎನ್ನುತ್ತಿದ್ದ ಮಾರುಕಟ್ಟೆಗೆ ಇಂದು ಜೀವಕಳೆ ಬಂದಿದ್ದು, ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ, ನಗರದಲ್ಲಿನ ಹೂವು ಹಣ್ಣು ಮಾರ್ಕೆಟ್ಗಳಲ್ಲಿ ಜನ ಜಾತ್ರೆಯೇ ಸೇರಿದೆ.
ನಗರದ ದುರ್ಗದ ಬೈಲ್, ಜನತಾ ಬಜಾರ್ ಸೇರಿದಂತೆ ಹುಬ್ಬಳ್ಳಿಯ ಬಹುತೇಕ ಹೂವು, ಹಣ್ಣು ಮಾರುಕಟ್ಟೆಯಲ್ಲಿ ಜನರು ಹೂವು ಹಣ್ಣು ಖರೀದಿಸುತ್ತಿದ್ದಾರೆ. ಕೊರೊನಾ ಸೊಂಕು ಹರಡುತ್ತಿರುವುದರಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಮನವಿ ಮಾಡಿದರೂ ಸಹ ಜನ ಮಾತ್ರ ಇದಕ್ಕೆ ತಲೆ ಕೆಡಿಸಿಕೊಳ್ಳದೆ ಖರೀದಿಯಲ್ಲಿ ಸಂಪೂರ್ಣ ಮಗ್ನರಾಗಿದ್ದಾರೆ.
ಇಷ್ಟು ದಿನ ಹೂ, ಹಣ್ಣು ಖರೀದಿ ಇಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದರು. ಇದೀಗ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ಕ ಕೈತುಂಬಾ ವ್ಯಾಪಾರವಾಗುತ್ತಿದ್ದು, ಹೂ, ಹಣ್ಣುಗಳ ದರ ಕೂಡ ಗಗನಕ್ಕೇರಿದೆ. ಎಷ್ಟೇ ದುಬಾರಿಯಾದರೂ ಸರಿಯೇ ಹೂ-ಹಣ್ಣು ಮಾತ್ರ ಅತ್ಯವಶ್ಯಕ ಎಂದು ಜನರು ಖರೀದಿಯಲ್ಲಿ ತೊಡಗಿದ್ದಾರೆ.