ETV Bharat / state

ವಿದೇಶಿ ಸಾಲ ಮುರುಪಾವತಿಸುವಷ್ಟು ಶಕ್ತಿ ದೇಶಕ್ಕಿದೆ; ಚರಂತಿಮಠ ಸಮರ್ಥನೆ - ಎಸ್.ಜೆ.ಎಮ್.ವಿ.ಎಸ್. ಕಲಾ ಮತು ವಾಣಿಜ್ಯ ಮಹಿಳಾ ವಿಶ್ವವಿದ್ಯಾಲಯ

ಸರ್ಕಾರದ ಮುಂಗಡ ಪತ್ರ ಕುರಿತು ವಿಶೇಷ ಉಪನ್ಯಾಸದಲ್ಲಿ ಹಿರಿಯ ಲೆಕ್ಕ ಪರಿಶೋಧಕರಾದ ಡಾ. ಎನ್. ಎ. ಚರಂತಿಮಠ ಪಾಲ್ಗೊಂಡಿದ್ದು, ದೇಶದ ಆರ್ಥಿಕ ಸಧೃಡತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

Charantimath
ಡಾ. ಎನ್. ಎ. ಚರಂತಿಮಠ ಅವರ ಮಾತು
author img

By

Published : Feb 4, 2020, 2:35 PM IST

ಹುಬ್ಬಳ್ಳಿ: 2014 ರಿಂದ ಇಲ್ಲಿಯವರೆಗೆ ಭಾರತ ಸರ್ಕಾರ ಯಾವುದೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ತಂದಿಲ್ಲ, ಬದಲಾಗಿ ಈ ಹಿಂದಿನ ಸರ್ಕಾರ ಮಾಡಿದ ವಿದೇಶಿ ಸಾಲಗಳನ್ನು ಮುರುಪಾವತಿಸುವಷ್ಟು ಆರ್ಥಿಕ ಸದೃಢತೆಯನ್ನು ದೇಶ ಹೊಂದಿದೆ ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಡಾ. ಎನ್. ಎ. ಚರಂತಿಮಠ ಹೇಳಿದರು.

ಡಾ. ಎನ್. ಎ. ಚರಂತಿಮಠ ಅವರ ಮಾತು

ನಗರದ ಎಸ್.ಜೆ.ಎಮ್.ವಿ.ಎಸ್. ಕಲಾ ಮತು ವಾಣಿಜ್ಯ ಮಹಿಳಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ನಡೆದ ಕೇಂದ್ರ ಸರ್ಕಾರದ ಮುಂಗಡ ಪತ್ರ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಆರ್ಥಿಕವಾಗಿ ಸಧೃಡವಾಗಿದ್ದು, ಈ ಬಾರಿ ಉನ್ನತ ಶಿಕ್ಷಣಕ್ಕೆ 69,000 ಕೋಟಿ ರೂ ಹಂಚಿಕೆ ಮಾಡಲಾಗಿದೆ, ಇದು ಹಿಂದಿಗಿಂತಲೂ ಹೆಚ್ಚಿನ ಅನುದಾನವಾಗಿದೆ ಎಂದರು.

ಅಲ್ಲದೇ ಶಿಕ್ಷಣಕ್ಕೆ ವಾರ್ಷಿಕ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ6% ರಷ್ಟು, ಅಂದರೆ ಸುಮಾರು 3.5 ಲಕ್ಷ ಕೋಟಿ ರೂ.ಗಳ ಬೇಡಿಕೆ ಇದ್ದು, ಅದರಂತೆ ಸ್ವ-ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ನಿರುದ್ಯೋಗ ಸಮಸ್ಯೆಗೆ ಈ ಬಜೆಟ್‍ನಲ್ಲಿ ಸಂಪನ್ಮೂಲಗಳನ್ನ ಕೇಂದ್ರ ಸರ್ಕಾರ ಒದಗಿಸಿದೆ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.