ETV Bharat / state

ಸಿದ್ದರಾಮಯ್ಯನವರ 'ನಾಯಿಮರಿ' ಹೇಳಿಕೆಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಟೀಕಾಸಮರ - ರಾಜ್ಯಸಭಾ ಸದಸ್ಯ ಜಗ್ಗೇಶ್

ಸಿಎಂ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ್ದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಸಭೆ ಸದಸ್ಯ, ಚಿತ್ರನಟ ಜಗ್ಗೇಶ್‌ ಟೀಕಾ ಸಮರ ನಡೆಸಿದ್ದಾರೆ.

Rajya Sabha member Jaggesh
ರಾಜ್ಯಸಭಾ ಸದಸ್ಯ ಜಗ್ಗೇಶ್​
author img

By

Published : Jan 6, 2023, 12:53 PM IST

ಧಾರವಾಡ: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಾಯಿಮರಿಗೆ ಹೋಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿದ ರಾಜ್ಯಸಭಾ ಸದಸ್ಯ ಜಗ್ಗೇಶ್,​ ಅವರ ಮಾತು ಲೆಕ್ಕಕ್ಕಿಲ್ಲ ಎಂದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡುತ್ತಾ, 'ನನ್ನ ಪ್ರಕಾರ ಅರ್ಥೈಸುವಂಥದ್ದು, ವಾದ ಮಾಡುವಂಥದ್ದು, ತಿಳಿದುಕೊಳ್ಳುವಂಥದ್ದು, ಏನು ನಡೆದಿದೆ ಅಂತ ಹೇಳುವಂತವರು ಯಾರು ಇರ್ತಾರೋ ಅವರ ಬಾಯಲ್ಲಿ ಅಪಭ್ರಂಶ ಬರೋದಿಲ್ಲ. ಯಾರಿಗೆ ದ್ವೇಷ ಇರುತ್ತೆ, ನನಗೆ ಮಾಡೋಕಾಗಲ್ಲ ಅನ್ನೋ ಅಸಹಾಯಕತೆ ಇರುತ್ತೋ ಅಂಥವರು ಕೆಟ್ಟ ಮಾತುಗಳ ಮೂಲಕ ಕೋಪ ತೋರ್ಪಡಿಸುತ್ತಾರೆ' ಎಂದು ತನ್ನದೇ ಧಾಟಿಯಲ್ಲಿ ಟೀಕಿಸಿದರು.

'ಸಿಎಂ ಆಗಲಿ ಅಥವಾ ಪ್ರಧಾನಿ ಮೋದಿ ಆಗಲಿ ರಾಷ್ಟ್ರಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಮಾಡುತ್ತಿರುವ ಎಲ್ಲ ಕೆಲಸಗಳ ಬಗ್ಗೆ ಜನಸಾಮಾನ್ಯರಿಗೆ ಅದ್ಭುತವಾಗಿ ತಿಳಿದಿದೆ. ಹಾಗಾಗಿ ಸಿದ್ದರಾಮಯ್ಯ ಹೇಳಿರುವ ಮಾತುಗಳನ್ನು ಯಾರೂ ಕೂಡ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಡುವ ಅವಶ್ಯಕತೆಯೂ ಇಲ್ಲ' ಎಂದರು.

ಸಿದ್ದರಾಮಯ್ಯ ಹೇಳಿದ್ದೇನು?: ಇತ್ತೀಚೆಗೆ ಹಗರಿಬೊಮ್ಮನಹಳ್ಳಿ ಪಟ್ಟಣದ ಜಿ.ಬಿ.ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ, ಕಾಂಗ್ರೆಸ್​ ಪಕ್ಷದ ನಾಯಕರ ತಾಕತ್ತು, ದಮ್ಮಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಾಯಿಮರಿಯಂತೆ ಇರುತ್ತಾರೆ. ಅವರ ಮುಂದೆ ಗಡಗಡ ಎಂದು ಹೇಳಿದ್ದರು.

ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ: ಮುಖ್ಯಮಂತ್ರಿ ಅವರನ್ನು ನಾಯಿಮರಿಗೆ ಹೋಲಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಗ್ಯ ಸಚಿವ ಡಾ.ಸುಧಾಕರ್​, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಸ್ವತಃ ಸಿಎಂ ಬೊಮ್ಮಾಯಿ ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದರು. 'ನಾವು ಆಡುವ ಮಾತು ನಮ್ಮ ವ್ಯಕ್ತಿತ್ವ ಹೇಳುತ್ತದೆ. ಅವರು ಆ ರೀತಿ ಹೇಳಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಇದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಾಯಿ ನಿಯತ್ತಿನ ಪ್ರಾಣಿ. ನಾನು ನಿಯತ್ತಿನಿಂದ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹೀಗೆಯೇ ನಿಯತ್ತಿನಿಂದ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯ ಅವರು ಆಡಿರುವ ಮಾತಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ' ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದರು.

ತಾವು ಹೇಳಿದ ಹೇಳಿಕೆ ವಿವಾದಕ್ಕೊಳಗಾಗುತ್ತಿದ್ದಂತೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು. 'ಮುಖ್ಯಮಂತ್ರಿ ಅವರನ್ನು ನೇರವಾಗಿ ನಾನು ನಾಯಿಮರಿ ಎಂದು ಹೇಳಿಲ್ಲ. ಪ್ರಧಾನಿ ಮುಂದೆ ಮಾತನಾಡಲು ಮುಖ್ಯಮಂತ್ರಿ ಅವರಿಗೆ ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ. ಕೇಂದ್ರದಿಂದ ಅನುದಾನ ತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಸರಿಯಾಗಿ ಬಂದಿಲ್ಲ. ರಾಜ್ಯದ ಹಿತದೃಷ್ಟಿಗಾಗಿ ಧೈರ್ಯ ತೋರಿಸಬೇಕು, ನಾಯಿಮರಿಯಂತೆ ಇರಬಾರದು ಎಂದು ಹೇಳಿದ್ದೆ. ನಾನು ಸದುದ್ದೇಶದಿಂದ ಹೇಳಿದ್ದೇನೆಯೇ ಹೊರತು ಬೇರೆ ಯಾವುದೇ ಕಾರಣ ಇಲ್ಲ. ನಾಯಿ ಎಂದರೆ ನಂಬಿಕೆಯುಳ್ಳ ಪ್ರಾಣಿ' ಎಂದು ತಿಳಿಸಿದ್ದರು.

ಸಿಎಂಗೆ 'ರಾಜಾಹುಲಿ' ಬಿರುದು ನೀಡುತ್ತೇನೆ: ಇನ್ನು, ಇಂದು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವರಿಗೆ ಹೊಸ ಸವಾಲೊಂದನ್ನು ಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಬೊಮ್ಮಾಯಿ ಅವರು ಧೈರ್ಯದಿಂದ ಪ್ರಧಾನಿ ಮುಂದೆ ಹೇಳಿ ರಾಜ್ಯಕ್ಕೆ ನ್ಯಾಯ ಕೊಡಿಸಿದ್ದೇ ಆದಲ್ಲಿ, ನಾನು ಹೇಳಿದ 'ನಾಯಿಮರಿ' ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಅದರ ಬದಲಾಗಿ ಅವರ ಧೈರ್ಯಕ್ಕೆ 'ರಾಜಾಹುಲಿ' ಎಂದು ಬಿರುದು ಕೊಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ್ದರ ಹಿಂದೆ ಸದುದ್ದೇಶವಿದೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.