ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಹೊಸ ವರ್ಷಾಚರಣೆ ನಿಮಿತ್ತ ಜ.1ರಿಂದ 30ರ ವರೆಗೆ 'ಬೇಡ ಮದ್ಯಪಾನ-ಮಾಡು ಯೋಗ ಧ್ಯಾನ' ವಿಶೇಷ ಆನ್ಲೈನ್ ಯೋಗ ಶಿಬಿರವನ್ನ ಆಯೋಜಿಸಲಾಗಿದೆ ಎಂದು ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು, ಸ್ವದೇಶಿ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಅಗ್ನಿ ಹೋತ್ರ ಇವುಗಳನ್ನು ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡು ನೆಮ್ಮದಿಯ ಜೀವನದ ಜೊತೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಈ ಯೋಗ ಶಿಬಿರದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರದ ಯೋಗ ಖುಷಿ ಸ್ವಾಮಿ ರಾಮದೇವ್ ಬಾಬಾ, ಕೇಂದ್ರೀಯ ಪ್ರಭಾರಿ ಸಾಧ್ವಿ ದೇವಪ್ರಿಯ ಸೇರಿದಂತೆ 50ಕ್ಕೂ ಹೆಚ್ಚು ಯೋಗ ಪರಿಣಿತರು ಉಚಿತ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ 8-80 ವರ್ಷದ ವಯೋಮಾನದವರು ಭಾಗವಹಿಸಬಹುದಾಗಿದ್ದು, ತರಬೇತಿ ಸಂಪೂರ್ಣ ಉಚಿತವಾಗಿದೆ ಎಂದು ತಿಳಿಸಿದರು.