ಹುಬ್ಬಳ್ಳಿ: ಇದು ಶತಮಾನ ಕಂಡಿರುವ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ. ಶಾಲೆಯ ಗೋಡೆಗಳು ಶಿಥಿಲಗೊಂಡು ಕುಸಿದು ಬೀಳುವ ಹಂತ ತಲುಪಿದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಹಳೇ ಹುಬ್ಬಳ್ಳಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಶಿಥಿಲಗೊಂಡಿದ್ದು, ಅದರ ಪಕ್ಕದಲ್ಲಿ ಹೊಸದಾಗಿ ಶಾಲೆ ನಿರ್ಮಿಸಲಾಗಿದೆ. ಆದರೆ ಹಳೇ ಶಾಲೆಯನ್ನು ಕೆಡವದೇ ಹಾಗೆಯೇ ಬಿಟ್ಟಿರುವುದರಿಂದ ಯಾವಾಗ ತಂತಾನೆ ಬಿದ್ದು ಅನಾಹುತ ಉಂಟು ಮಾಡುತ್ತದೆಯೋ ಎಂಬ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೀರಿಗೆ ಬಿದ್ದು ಹಾಳಾಯ್ತು ಸಾಲ ಮಾಡಿ ಕೊಂಡುಕೊಂಡಿದ್ದ ಮೊಬೈಲ್.. ಮನನೊಂದ ಯುವಕ ಆತ್ಮಹತ್ಯೆ!
ಹೊಸ ಕಟ್ಟಡದಲ್ಲಿ ಸ್ಮಾರ್ಟ್ ಕ್ಲಾಸ್ ಡೆಸ್ಕ್‌ಗಳು, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿಯುವ ನೀರು, 4 ಸಿಸಿ ಟಿವಿ ಕ್ಯಾಮರಾ, ಸೈರನ್ ಅಲಾರಾಂ, ಗೋಡೆಗಳ ಮೇಲೆ ಬಂದ ಚಿತ್ತಾರ.. ಹೀಗೆ ಹತ್ತಾರು ಸೌಲಭ್ಯಗಳಿವೆ. ಈ ನೂತನ ಕಟ್ಟಡದ ಪಕ್ಕದಲ್ಲೇ ಈ ಹಳೇ ಶಾಲೆ ಇರುವುದರಿಂದ ಮಕ್ಕಳು ಅಲ್ಲಿಗೆ ಹೋಗಿ ಆಟ ಆಡಲು ಮುಂದಾಗುತ್ತಾರೆ. ಇದರಿಂದ ಶಿಕ್ಷಕರಿಗೆ ಮಕ್ಕಳನ್ನು ಕಾಯುವುದೇ ಕೆಲಸವಾಗಿದೆ.