ETV Bharat / state

ವಿವಿಧ ದೇವಸ್ಥಾನಗಳಿಗೆ ಮುತಾಲಿಕ್ ಭೇಟಿ: ಸುಪ್ರಭಾತ ಮೊಳಗಿಸುವಂತೆ ಮನವಿ

ಮೇ.9 ರಂದು ಬೆಳಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ಸುಪ್ರಭಾತ ಹಾಗೂ ಓಂಕಾರ ನಾದ ಮೊಳಗಿಸುವಂತೆ ದೇವಸ್ಥಾನದ ಕಮಿಟಿಯವರಿಗೆ ಹಾಗೂ ಅರ್ಚಕರಿಗೆ ಪ್ರಮೋದ್ ಮುತಾಲಿಕ್ ಮನವಿ ಸಲ್ಲಿಸಿದ್ದಾರೆ.

Appeal To play Suprabhatha in emples
ವಿವಿಧ ದೇವಸ್ಥಾನಗಳಿಗೆ ಮುತಾಲಿಕ್ ಭೇಟಿ
author img

By

Published : May 4, 2022, 10:47 PM IST

ಧಾರವಾಡ: ನಗರದ ವಿವಿಧ ದೇವಸ್ಥಾನಗಳಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡುತ್ತಿದ್ದಾರೆ. ಮೇ.9 ರಂದು ಬೆಳಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ಸುಪ್ರಭಾತ ಹಾಗೂ ಓಂಕಾರ ನಾದ ಮೊಳಗಿಸುವಂತೆ ದೇವಸ್ಥಾನದ ಕಮಿಟಿ ಅವರಿಗೆ ಹಾಗೂ ಅರ್ಚಕರಿಗೆ ಮನವಿ ಸಲ್ಲಿಸಿದ್ದಾರೆ.

ಮಸೀದಿಗಳ ಮೇಲೆ ಇರುವ ಧ್ವನಿ ವರ್ಧಕಗಳಿಂದ ಬರುವ ಶಬ್ದವನ್ನು ನಿಯಂತ್ರಿಸುವಂತೆ ಮುತಾಲಿಕ್ ಅವರು ಈ ಹಿಂದೆಯೇ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇಂತಿಷ್ಟೆ ಶಬ್ದ ಇರಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಮಸೀದಿಗಳು ಅದನ್ನು ಉಲ್ಲಂಘಿಸುತ್ತಿವೆ. ಹೀಗಾಗಿ ಹಿಂದೂ ದೇವಾಲಯಗಳಲ್ಲೂ ಸುಪ್ರಭಾತ ಹಾಗೂ ಓಂಕಾರ ನಾದ ಮೊಳಗಿಸುವಂತೆ ಅಭಿಯಾನವನ್ನು ಆರಂಭಿಸಿದ್ದಾರೆ.

ವಿವಿಧ ದೇವಸ್ಥಾನಗಳಿಗೆ ಮುತಾಲಿಕ್ ಭೇಟಿ

ಧಾರವಾಡದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮುತಾಲಿಕ್, ಮೇ.9 ರಿಂದ ಬೆಳಗ್ಗೆ 5 ಗಂಟೆಯಿಂದಲೇ ಸುಪ್ರಭಾತ ಹಾಕುವಂತೆ ಮನವಿ ಮಾಡಿದರು. ಧಾರವಾಡದ ದತ್ತಾತ್ರೇಯ ದೇವಸ್ಥಾನ, ಲೈನ್ ಬಜಾರ್ ಆಂಜನೇಯ ದೇವಸ್ಥಾನ, ಶಿವಾಲಯ, ಲಕ್ಷ್ಮೀನಾರಾಯಣ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ತೆರಳಿದ ಮುತಾಲಿಕ್ ಅವರು ಧ್ವನಿವರ್ಧಕಗಳಿಂದ ಓಂಕಾರ ನಾದ ಮೊಳಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪಿಎಸ್​ಐ ಪರೀಕ್ಷಾ ಹಗರಣದಲ್ಲಿ ಕಾಂಗ್ರೆಸ್​ನಿಂದ ಅಶ್ವತ್ಥ್​ ನಾರಾಯಣ ಟಾರ್ಗೆಟ್​: ಪ್ರತಾಪ್ ಸಿಂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.