ಧಾರವಾಡ: ಮುರುಘಾ ಮಠ ಜಾತ್ರೆ ಹಿನ್ನೆಲೆ ಜನ ಸೇರದಂತೆ ತಡೆಯಲು ನಸುಕಿನ ಜಾವ ರಥೋತ್ಸವ ನೇರವೇರಿಸಲಾಗಿದೆ. ಕೊರೊನಾ ಹಾಗೂ ಒಮಿಕ್ರಾನ್ ಭೀತಿ ಹಿನ್ನೆಲೆ ಜಾತ್ರೆ ರದ್ದು ಮಾಡಲು ಮಠದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಹಾಗಾಗಿ ಸಾಂಪ್ರದಾಯಿಕವಾಗಿ ಮಾತ್ರ ಸ್ವಲ್ಪ ದೂರ ರಥೋತ್ಸವ ನೆರವೇರಿಸಲಾಗಿದೆ.
ಪ್ರತಿ ವರ್ಷ ಅದ್ಧೂರಿಯಾಗಿ ಮುರುಘಾ ಮಠದ ರಥೋತ್ಸವ ನಡೆಯುತ್ತಿತ್ತು. ಸಹಸ್ರಾರು ಜನರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದರು. ನಿತ್ಯ ಒಂದೊಂದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ ಅದ್ದೂರಿಯಾಗಿ ಜಾತ್ರೆ ಮಾಡಲಾಗುತ್ತಿತ್ತು. ಆದರೆ ಕೋವಿಡ್ ನಿರ್ಬಂಧ ಇರುವ ಕಾರಣ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ: ಸಂಸತ್ನಲ್ಲಿ 'ಕರ್ನಾಟಕದ ಹಿಜಾಬ್' ಸದ್ದು: ಎಐಎಂಐಎಂ,ಡಿಎಂಕೆ - ಕಾಂಗ್ರೆಸ್ ಸಂಸದರಿಂದ ತರಾಟೆ!
ಮಧ್ಯಾಹ್ನ ರಥೋತ್ಸವ ನೆರವೇರಿಸಿದರೆ, ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಬಹುದು ಎಂಬ ಕಾರಣದಿಂದ ನಸುಕಿನ ಜಾವ ರಥ ಎಳೆದು ಸಂಪ್ರದಾಯ ಪೂರೈಸಲಾಗಿದೆ. ಉಳಿದಂತೆ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ತಿಳಿದು ಬಂದಿದೆ.