ಹುಬ್ಬಳ್ಳಿ: ಧಾರವಾಡದ ಸುದಿಶಾ ಇವೆಂಟ್ಸ್ ನಡೆಸಿದ 'ಶ್ರೀಮತಿ ಹುಬ್ಬಳ್ಳಿ-2020 ಆನ್ಲೈನ್ ಸ್ಪರ್ಧೆ'ಯಲ್ಲಿ ಭಾಗವಹಿಸುವ ಮೂಲಕ ನಗರದ ನಿವಾಸಿ ಸುಪ್ರಿಯಾ ಕರಿ ವಿಜೇತರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀಮತಿ ಸುಪ್ರಿಯಾ ಕರಿ 'ಶ್ರೀಮತಿ ಹುಬ್ಬಳ್ಳಿ-2020' ಕಿರೀಟಮುಡಿಗೇರಿಸಿಕೊಂಡರೆ, ಶ್ರೀಮತಿ ಸ್ಮಿತಾ ಕೋರಂ ದೇಸಾಯಿ ಮತ್ತು ನಮಿತಾ ಎಂಬುವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ರು. ಸ್ಪರ್ಧೆಯ ನಿರ್ಣಾಯಕರಾಗಿ ಮಾರ್ತಾಂಡಪ್ಪ ಕತ್ತಿ, ವಂದನಾ ಮುಳಗುಂದಮಠ, ಚಂದ್ರಿಕಾ ಕರವೀರಮಠ ಭಾಗವಹಿಸಿದ್ದರು.